ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ತಾಲಿಬಾನ್‌ ಕಾರ್ಯದರ್ಶಿ ಎನ್ನಲಾದ ವ್ಯಕ್ತಿ ಬಿಜೆಪಿಯನ್ನು ಹೊಗಳಿಲ್ಲ

Fact Check
Published 16 ಅಕ್ಟೋಬರ್ 2023, 20:29 IST
Last Updated 16 ಅಕ್ಟೋಬರ್ 2023, 20:29 IST
ಅಕ್ಷರ ಗಾತ್ರ

‘ಬಿಜೆಪಿ ಇರುವ ತನಕ ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ– ತಾಲಿಬಾನ್‌ ಕಾರ್ಯದರ್ಶಿ ಅಲ್‌ ಬೇಡರ್‌ ಇಲ್ಯಾಸಿ. ದೇಶಕ್ಕೆ ಬಿಜೆಪಿ ಎಷ್ಟು ಅವಶ್ಯ ಇದೆ ಎಂದು ಯಾಕೆ ದೇಶದ ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ. ಅದರಲ್ಲೂ ಹಿಂದೂಗಳು’ ಎಂಬ ಪೋಸ್ಟರ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.

2021ರಿಂದಲೂ ಇದೇ ಪೋಸ್ಟರ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಗಿಂದಲೂ ‘ದಿ ಕ್ವಿಂಟ್‌’ ಸೇರಿದಂತೆ ವಿವಿಧ ಮಾಧ್ಯಮಗಳು ಫ್ಯಾಕ್ಟ್‌ಚೆಕ್‌ ಪ್ರಕಟಿಸಿವೆ. ಬೇರೆ ಬೇರೆ ಮಾದರಿಯ ಪೋಸ್ಟರ್‌ಗಳು ಹರಿದಾಡುತ್ತಿವೆ. ಈ ಹಿಂದಿನ ಪೋಸ್ಟರ್‌ನಲ್ಲಿ ‘ಎನ್‌ಬ್ಲೂಎಎ ಸ್ಟುಡಿಯೊ’ ಎಂದು ನಮೂದಾಗಿದೆ. ಯೂಟ್ಯೂಬ್‌ನಲ್ಲಿ ಈ ಚಾನೆಲ್‌ ಅನ್ನು ಹುಡುಕಿದರೆ, 17.5 ನಿಮಿಷದ ವಿಡಿಯೊವೊಂದು ದೊರೆಯುತ್ತದೆ. ಈ ವಿಡಿಯೊದಲ್ಲಿ, ವಿಡಿಯೊವನ್ನು 2019ರ ಮಾರ್ಚ್‌ 1ರಂದು ಚಿತ್ರೀಕರಿಸಲಾಗಿದೆ ಎಂದು ಬರೆದುಕೊಂಡಿದೆ. ಹಾಗೆಯೇ ವಿಡಿಯೊದಲ್ಲಿ ಇರುವವರು ಖಲೀದ್‌ ಮೆಹಮೂದ್‌ ಅಬ್ಬಾಸಿ ಎಂದೂ ಹೇಳಲಾಗಿದೆ. 2021ರಲ್ಲಿ ಕ್ವಿಂಟ್‌ ತನ್ನ ಫ್ಯಾಕ್ಟ್‌ಚೆಕ್‌ ಪ್ರಕಟಿಸುವ ವೇಳೆ ಅಬ್ಬಾಸಿ ಅವರನ್ನು ಸಂಪರ್ಕಿಸಿತ್ತು. ‘ನಾನು ತಾಲಿಬಾನ್‌ಗೆ ಸೇರಿದವನಲ್ಲ. ನಾನೊಬ್ಬ ಮೌಲ್ವಿ’ ಎಂದಿದ್ದರು. ಪೂರ್ಣ ಪ್ರಮಾಣದ ವಿಡಿಯೊವನ್ನು ಕೇಳಿಸಿಕೊಂಡರೂ, ಎಲ್ಲಿಯೂ ಪೋಸ್ಟರ್‌ನಲ್ಲಿ ಇರುವಂತೆ ಅವರು ಬಿಜೆಪಿಯ ಬಗ್ಗೆ ಮಾತನಾಡಿಲ್ಲ. ಭಾರತದಲ್ಲಿ ಮುಸ್ಲಿಮರ ಸ್ಥಿತಿಗತಿ ಕುರಿತು ಮಾತನಾಡಿದ್ದಾರೆ ಮತ್ತು ಬಿಜೆಪಿಯು ಮುಸ್ಲಿಮರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದೇ ಮಾತನಾಡಿದ್ದಾರೆ. ಆದ್ದರಿಂದ, ಪೋಸ್ಟರ್‌ನಲ್ಲಿ ಹೇಳಿರುವಂತೆ ವಿಡಿಯೊದಲ್ಲಿ ಇರುವವರು ಅಲ್‌ ಬೇಡರ್‌ ಇಲ್ಯಾಸಿ ಅಲ್ಲ. ಅವರು ತಾಲಿಬಾಲ್‌ ಕಾರ್ಯದರ್ಶಿಯೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT