ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್‌ನಲ್ಲಿ ನಡೆದ ಪ್ರತಿಭಟನೆಗೂ ಬಿಬಿಸಿ ಸಾಕ್ಷ್ಯಚಿತ್ರ ವಿರೋಧಕ್ಕೂ ಸಂಬಂಧವಿಲ್ಲ

Last Updated 29 ಜನವರಿ 2023, 19:30 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಗೋಧ್ರಾ ಹಾಗೂ ಗೋಧ್ರೋತ್ತರ ಹತ್ಯಾಕಾಂಡದ ವಿಷಯವನ್ನು ಒಳಗೊಂಡಿರುವ ಸಾಕ್ಷ್ಯಚಿತ್ರವನ್ನು ನಿರ್ಮಿಸಿರುವ ಬಿಬಿಸಿ ವಾಹಿನಿ ವಿರುದ್ಧ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಲಂಡನ್‌ನಲ್ಲಿಯೂ ಇಂತಹ ಪ್ರತಿಭಟನೆ ನಡೆದಿದೆ ಎಂದು ಹೇಳಲಾಗುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ಭಾರತ ಹಾಗೂ ಮೋದಿ ಅವರ ವಿರುದ್ಧ ದುರುದ್ದೇಶದ ಸಂಗತಿ ಹರಡುತ್ತಿರುವ ಸಾಕ್ಷ್ಯಚಿತ್ರದ ವಿರುದ್ಧ ಲಂಡನ್‌ನಲ್ಲಿ ಪ್ರತಿಭಟನೆ ಆರಂಭವಾಗಿದೆ. ಭಾರತೀಯರೇ ಎಲ್ಲಿದ್ದೀರಾ?’ ಎಂದು ‘ದೇಶ್‌ಭಕ್ತ್’ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಪ್ರಶ್ನಿಸಲಾಗಿದೆ. ಆದರೆ ಇದು ದಾರಿ ತಪ್ಪಿಸುವ ಮಾಹಿತಿ.

ಇದೇ ಜನವರಿ 21ರಂದು ಲಂಡನ್‌ನ ಬಿಬಿಸಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆದಿದೆ. ಆದರೆ, ಅದು ಮೋದಿ ಅವರನ್ನು ಕುರಿತ ಸಾಕ್ಷ್ಯಚಿತ್ರದ ವಿರುದ್ಧ ಅಲ್ಲ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಕೋವಿಡ್ ತಡೆ ಲಸಿಕೆಗಳಿಂದ ಸಾವು ಹಾಗೂ ತೊಂದರೆ ಉಂಟಾಗಿದ್ದರೂ, ಈ ಬಗ್ಗೆ ಮಾಧ್ಯಮಗಳು ತನಿಖೆಗೆ ಮುಂದಾಗುತ್ತಿಲ್ಲ ಎಂದು ಆರೋಪಿಸಿ, ಬಿಬಿಸಿ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳ ನಡೆಯನ್ನು ಖಂಡಿಸಿ ಜನರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ವಿಡಿಯೊವನ್ನೇ, ಮೋದಿ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರದ ವಿರುದ್ಧ ನಡೆದ ಪ್ರತಿಭಟನೆ ಎಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು ‘ಇಂಡಿಯಾ ಟುಡೇ’ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT