ವಿಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಚರಂಡಿಯ ಪಕ್ಕದಲ್ಲಿ ಕಾರನ್ನು ನಿಲ್ಲಿಸಿ, ಅದರಲ್ಲಿದ್ದ ಮಹಿಳೆಯನ್ನು ನೀರಿನೊಳಗೆ ತಳ್ಳುವ ದೃಶ್ಯಗಳನ್ನು ವಿಡಿಯೊ ಒಳಗೊಂಡಿದೆ. ‘ವಿಪರೀತ ಎನ್ನುವಷ್ಟು ಮದ್ಯಸೇವನೆ ಮಾಡಿದ್ದ ಯುವತಿಯನ್ನು ರಾತ್ರಿ ಪಾರ್ಟಿಯ ನಂತರ ಚರಂಡಿಗೆ ಎಸೆಯಲಾಗಿದೆ. ಯುವತಿಯರು ಅತಿಯಾಗಿ ಆಧುನಿಕತೆ ಅಪ್ಪಿಕೊಂಡರೆ ಆಗುವುದು ಇದೇ. ಹೀಗಾಗಿ ನಿಮ್ಮ ಹಿರಿಯರು ಹೇಳುವುದನ್ನು ಕೇಳಿ. ಕನಿಷ್ಠ ಚರಂಡಿಗೆ ಎಸೆಯಲ್ಪಡುವುದರಿಂದ ತಪ್ಪಿಸಿಕೊಳ್ಳಬಹುದು’ ಎಂದು ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಮೊದಲು, ಇಂಥ ಘಟನೆ ಎಲ್ಲಿಯಾದರೂ ನಡೆದಿದೆಯೇ ಎನ್ನುವುದನ್ನು ತಿಳಿಯಲು ನಿರ್ದಿಷ್ಟ ಪದದ ಮೂಲಕ ಗೂಗಲ್ನಲ್ಲಿ ಹುಡುಕಾಟ ನಡೆಸಿದಾಗ, ಘಟನೆ ಪುಷ್ಟೀಕರಿಸುವ ಯಾವ ವರದಿಯೂ ಸಿಗಲಿಲ್ಲ. ಜಾಲತಾಣಗಳಲ್ಲಿ ವಿಡಿಯೊಗೆ ಬಂದ ಪ್ರತಿಕ್ರಿಯೆಗಳನ್ನು ಪರಿಶೀಲಿಸಿದಾಗ, ಕೆಲವರು ಇದು 2017ರ ‘ಮಾಮ್’ ಎನ್ನುವ ಹಿಂದಿ ಚಿತ್ರದ ದೃಶ್ಯ ಎಂದು ಪ್ರತಿಕ್ರಿಯಿಸಿದ್ದರು. ಯೂ ಟ್ಯೂಬ್ನಲ್ಲಿ ಸಿನಿಮಾಗಾಗಿ ಹುಡುಕಿದಾಗ, ‘ಬಾಲಿವುಡ್ ಪ್ರೀಮಿಯಂ’ ಚಾನೆಲ್ನಲ್ಲಿ ಚಿತ್ರ ಅಪ್ಲೋಡ್ ಆಗಿರುವುದು ಕಂಡಿತು. ಚಿತ್ರದ ಒಟ್ಟಾರೆ ಅವಧಿ 2.27 ಗಂಟೆ ಆಗಿದ್ದು, 24.04 ನಿಮಿಷದ ವೇಳೆ ಯುವತಿಯನ್ನು ಕಾರಿನಿಂದ ಎಳೆದು ಚರಂಡಿಗೆ ತಳ್ಳುವ ದೃಶ್ಯ ಬರುತ್ತದೆ. ಅಕ್ಷಯ್ ಖನ್ನಾ, ಶ್ರೀದೇವಿ ಮುಂತಾದವರು ನಟಿಸಿರುವ ‘ಮಾಮ್’ ಚಿತ್ರವನ್ನು ರವಿ ಉದ್ಯಾವರ ನಿರ್ದೇಶಿಸಿದ್ದು, ಬೋನಿ ಕಪೂರ್ ನಿರ್ಮಿಸಿದ್ದಾರೆ. ಸಿನಿಮಾದ ದೃಶ್ಯವೊಂದಕ್ಕೆ ವಾಸ್ತವದ ಕಥೆ ಕಟ್ಟಿ, ಅದನ್ನು ಹಂಚಿಕೊಳ್ಳುವ ಮೂಲಕ ಸುಳ್ಳು ಪ್ರತಿಪಾದನೆ ಮಾಡಲಾಗುತ್ತಿದೆ ಎಂದು ಫ್ಯಾಕ್ಟ್ಲಿ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.