ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರತ್ತ ಸಾರ್ವಜನಿಕ ಸಮಾರಂಭವೊಂದರಲ್ಲಿ ಚಪ್ಪಲಿ ಎಸೆಯಲಾಗಿದೆ ಎಂದು ಹೇಳುತ್ತಾ ಜೆಡಿ ಟ್ರೋಲ್ಸ್ ಎಂಬ ‘ಎಕ್ಸ್’ ಖಾತೆಯಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಲಾಗಿದೆ. ಎರಡೂ ಬದಿಗಳಲ್ಲಿ ಬೆಂಬಲಿಗರಿದ್ದು, ಅವರ ಮಧ್ಯದಲ್ಲಿ ಹಾಕಲಾಗಿದ್ದ ವೇದಿಕೆಯಲ್ಲಿ ಸ್ಟಾಲಿನ್ ಅವರು ನಡೆದುಕೊಂಡು ಬರುತ್ತಿರುವಾಗ ಅವರತ್ತ ತೂರಿರುವುದು ಚಿತ್ರದಲ್ಲಿ ಕಾಣಿಸುತ್ತಿದೆ. ಆದರೆ, ಇದು ಸುಳ್ಳು.

ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್ನಲ್ಲಿ ಹುಡುಕಿದಾಗ, ಚಪ್ಪಲಿ ಎಸೆದಿರುವುದರ ಬಗ್ಗೆ ವಿಶ್ವಾಸಾರ್ಹ ಮಾಧ್ಯಮ ವರದಿಗಳು ಸಿಗಲಿಲ್ಲ. ಗೂಗಲ್ ಲೆನ್ಸ್ನಲ್ಲಿ ಚಿತ್ರವನ್ನು ಹಾಕಿ ನೋಡಿದಾಗ, ಪಿಟಿಐನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಲಾದ ವಿಡಿಯೊವೊಂದು ಸಿಕ್ಕಿತು. ಫೆ.7ರಂದು ವಿರುಧುನಗರ್ನಲ್ಲಿ ಆಯೋಜಿಸಲಾಗಿದ್ದ ಡಿಎಂಕೆ ಯುವ ಘಟಕದ ಸಮಾವೇಶದ ಕಾರ್ಯಕ್ರಮದ ವಿಡಿಯೊ ಅದು. ಸಾಮಾಜಿಕ ಜಾಲತಾಣದಲ್ಲಿರುವ ಚಿತ್ರವೂ ಇದೇ ಕಾರ್ಯಕ್ರಮದ್ದಾಗಿತ್ತು. ಆ ವಿಡಿಯೊದಲ್ಲಿ ಚಪ್ಪಲಿ ಎಸೆಯುವ ದೃಶ್ಯ ಎಲ್ಲೂ ಇರಲಿಲ್ಲ. ಡಿಎಂಕೆ ಯುವ ಘಟಕದ ಅಧಿಕೃತ ಇನ್ಸ್ಟಾಗ್ರಾಂ ಪುಟದಲ್ಲೂ ವಿಡಿಯೊಗಳು ಫೋಟೊಗಳು ಇದ್ದವು ಅಲ್ಲೂ ಚಪ್ಪಲಿ ಎಸೆಯುವುದು ಕಾಣ ಸಿಗಲಿಲ್ಲ. ಸ್ಟಾಲಿನ್ ಅವರ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲೂ ಹಲವು ವಿಡಿಯೊಗಳು, ಚಿತ್ರಗಳಿದ್ದವು. ಅವುಗಳಲ್ಲೂ ಈ ಘಟನೆಯ ಬಗ್ಗೆ ಉಲ್ಲೇಖ ಇರಲಿಲ್ಲ. ಆ ಬಗ್ಗೆ ಮಾಧ್ಯಮಗಳಲ್ಲಿ ವರದಿಯೂ ಆಗಿಲ್ಲ. ಫೋಟೊವನ್ನು ತಿರುಚಿ ಕಾರ್ಯಕ್ರಮದಲ್ಲಿ ಸ್ಟಾಲಿನ್ ಮೇಲೆ ಚಪ್ಪಲಿ ತೂರಲಾಗಿದೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.