‘ಆರೋಗ್ಯದ ಆರೈಕೆಯ ದೃಷ್ಟಿಯಿಂದ ನಾವು ಅಸ್ಸಾಂನ ಗುವಹಾಟಿಯಿಂದ ಪಶ್ಚಿಮ ಬಂಗಾಳದ ಕಲ್ಯಾಣಿವರೆಗೆ, ಜಾರ್ಖಂಡ್‌ನ ದೇವಧರದಿಂದ ಬಿಹಾರದ ದರ್ಭಂಗಾದವರೆಗೆ ಎಮ್ಸ್ ಆಸ್ಪತ್ರೆಯನ್ನು ತೆರೆದಿದ್ದೇವೆ. ಚಿಕಿತ್ಸೆಗಾಗಿ ಈಗ ಜನರು ನೂರಾರು ಕಿ.ಮೀ. ಓಡಾಡಬೇಕಾಗಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆ.12ರಂದು ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್ ರಾಜ್ ಪರಿಷತ್ ಕಾರ್ಯಕ್ರಮದಲ್ಲಿ ಹೇಳಿದ್ದರು. ಆದರೆ, ಪ್ರಧಾನಿ ಅವರು ದರ್ಭಂಗಾದಲ್ಲಿ ಏಮ್ಸ್ ತೆರೆಯಲಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ.
‘ಏಮ್ಸ್ ನಿರ್ಮಾಣಕ್ಕಾಗಿ ಬಿಹಾರ ಸರ್ಕಾರ ಗೊತ್ತು ಮಾಡಿದ್ದ ಭೂಮಿಯ ಪ್ರಸ್ತಾವವನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ’ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರು ಹೇಳಿದ್ದರು. ಭೂಮಿಯ ಪ್ರಸ್ತಾವವನ್ನು ಕೇಂದ್ರ ಸರ್ಕಾರ ನಿರಾಕರಿಸಿ ಬರೆದಿದ್ದ ಪತ್ರವನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು 2023ರ ಮೇ 26ರಂದು ದೃಢಪಡಿಸಿದ್ದಾರೆ. ಆದ್ದರಿಂದ ಪ್ರಧಾನಿ ಮೋದಿ ಅವರು ಬಿಹಾರದ ದರ್ಭಂಗಾನಲ್ಲಿ ಏಮ್ಸ್ ಆಸ್ಪತ್ರೆ ನಿರ್ಮಿಸಲಾಗಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಬೂಮ್‌ಲೈವ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.