ಗುಂಪೊಂದು ವೇದಿಕೆಗೆ ಹತ್ತಿ, ವೇದಿಕೆಯನ್ನು ಧ್ವಂಸಗೊಳಿಸುವ ಮತ್ತು ಬಿಜೆಪಿ ಬ್ಯಾನರನ್ನು ಹರಿಯುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬಳಿಕ ಹರಿಯಾಣದಲ್ಲಿ ರೈತರು ನಡೆದುಕೊಂಡ ರೀತಿ ಇದು ಎಂದು ಹೇಳಲಾಗಿದೆ. ‘ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಹೇಳಿದ ಬಳಿಕ ಈ ರೀತಿಯ ಘಟನೆಗಳು ನಡೆಯುತ್ತಿವೆ. ಮಾಧ್ಯಮಗಳು ಇವನ್ನು ತೋರಿಸುವುದಿಲ್ಲ’ ಎಂದು ಅಡಿ ಬರಹ ನೀಡಲಾಗಿದೆ.

ಈ ಘಟನೆ ನಡೆದಿರುವುದು 2021ರ ಜನವರಿಯಲ್ಲಿ ಎಂದು ಲಾಜಿಕಲ್ ಇಂಡಿಯನ್ ಹೇಳಿದೆ. ಈ ಕುರಿತು ಎಬಿಪಿ ನ್ಯೂಸ್ 2021ರ ಜ.10ರಂದು ವರದಿ ಮಾಡಿದೆ. ಈ ಘಟನೆ ಹರಿಯಾಣದ ಕರ್ನಾಲ್‌ನಲ್ಲಿ ನಡೆದಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಆಯೋಜಿಸಿದ್ದ ಮಹಾಪಂಚಾಯಿತಿಗೆ ರೈತರು ಅಡ್ಡಿಪಡಿಸಿದ್ದರು. ಈ ಪ್ರತಿಭಟನೆ ನಡೆಸಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ಖಟ್ಟರ್ ಹರಿಹಾಯ್ದಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.