ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ನೇತ್ರ ತಪಾಸಣಾ ಶಿಬಿರ

Last Updated 22 ಜೂನ್ 2018, 11:37 IST
ಅಕ್ಷರ ಗಾತ್ರ

ಚಿಕ್ಕೋಡಿ: ತಾಲ್ಲೂಕಿನ ಖಡಕಲಾಟ ಗ್ರಾಮದಲ್ಲಿ ಉದ್ಯಮಿ ಡಿ.ಎಲ್. ಪಾಟೀಲ ಅವರ 19ನೇ ಸ್ಮೃತಿ ದಿನದ ನಿಮಿತ್ತ ಇತ್ತೀಚೆಗೆ ಉಚಿತ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಖಡಕಲಾಟ ಗ್ರಾಮದ ಡಿ.ಎಲ್. ಪಾಟೀಲ ಚಾರಿಟೇಬಲ್ ಟ್ರಸ್ಟ್‌, ಮಿರಜ್‌ನ ನ್ಯಾಬ್‌ ಕಣ್ಣು ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಮತ್ತು ಮೋತಿ ಬಿಂದು ಶಸ್ತ್ರಚಿಕಿತ್ಸೆ ಶಿಬಿರದಲ್ಲಿ 383 ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. 100 ಜನರನ್ನು ಮೋತಿ ಬಿಂದು ಶಸ್ತ್ರ ಕ್ರಿಯೆಗೆ ಆಯ್ಕೆ ಮಾಡಿ, ಮಿರಜ್‌ನಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಮರಳಿ ಸ್ವಗ್ರಾಮಕ್ಕೆ ತಲುಪಿಸುವ ವ್ಯವಸ್ಥೆ ಮಾಡಿಸಲಾಗಿದೆ ಎಂದು ಎ.ಎಲ್.ಪಾಟೀಲ ತಿಳಿಸಿದರು.

ಬಂಡಾ ಸರದಾರ ಶಿಬಿರಕ್ಕೆ ಚಾಲನೆ ನೀಡಿದರು. ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಎ.ಎಲ್. ಪಾಟೀಲ ಇದ್ದರು.

ಡಾ.ಅಖಿಬ್ ಮುಶ್ರೀಫ್‌, ರವೀಂದ್ರ ಕದಂ, ಮದಾರ್ ಮುಲ್ಲಾ, ವಿನಯ ಯಾದವ, ವಿನಾಯಕ ಇಂಗಳೆ ಹಾಗೂ ತಂಡದವರು ನೇತ್ರ ತಪಾಸಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT