ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರ: 100 ಅಡಿ ಉದ್ದದ ಮೃತ ತಿಮಿಂಗಿಲ ಪತ್ತೆ

Published 25 ಜೂನ್ 2024, 6:26 IST
Last Updated 25 ಜೂನ್ 2024, 6:26 IST
ಅಕ್ಷರ ಗಾತ್ರ

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿರುವ ಅರ್ನಾಲಾ ಸಮುದ್ರದ ತಟದಲ್ಲಿ ಸುಮಾರು 100 ಅಡಿ ಉದ್ದದ ಮೃತ ತಿಮಿಂಗಿಲ ದೊರೆತಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ. 

ಸೋಮವಾರ, ಬೃಹತ್‌ ತಿಮಿಂಗಿಲವೊಂದು ಸಮುದ್ರ ದಡದಲ್ಲಿ ಬಿದ್ದಿರುವ ಬಗ್ಗೆ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಹಡಗು ಅಥವಾ ಬೃಹತ್‌ ದೋಣಿ ಗುದ್ದಿದ ಪರಿಣಾಮ ತಿಮಿಂಗಿಲ ಮೃತಪಟ್ಟಿರುವಂತೆ ತೋರುತ್ತಿದೆ ಎಂದು ಸ್ಥಳೀಯ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಬೃಹದಾಕಾರದ ತಿಮಿಂಗಿಲ ಪತ್ತೆಯಾದ ಸುದ್ದಿ ಹರಡುತ್ತಿದ್ದಂತೆ ಅದನ್ನು ನೋಡಲು ಜನಸಾಗರ ಹರಿದುಬಂದಿತ್ತು. ಮೃತ ತಿಮಿಂಗಿಲವನ್ನು ಶಿಷ್ಟಾಚಾರದ ಪ್ರಕಾರ ವಿಲೇವಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT