ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ರಾಜಕೀಯ ಪಕ್ಷಗಳ ಸಂಖ್ಯೆ ಹೆಚ್ಚಳ: ಎಡಿಆರ್‌ ವರದಿ

2009 ರಿಂದ 2024ರ ಅವಧಿಯಲ್ಲಿ ಶೇ 104 ಏರಿಕೆ: ಎಡಿಆರ್‌
Published 29 ಮೇ 2024, 14:09 IST
Last Updated 29 ಮೇ 2024, 14:09 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ರಾಜಕೀಯ ಪಕ್ಷಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. 2009 ರಿಂದ 2024ರ ವರೆಗಿನ ಅವಧಿಯಲ್ಲಿ ರಾಜಕೀಯ ಪಕ್ಷಗಳ ಸಂಖ್ಯೆ ಶೇ 104 ರಷ್ಟು ಹೆಚ್ಚಳವಾಗಿದೆ ಎಂದು ಅಸೋಸಿಯೇಷನ್ ಫಾರ್‌ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್‌) ವರದಿ ತಿಳಿಸಿದೆ.

ಈ ಬಾರಿಯ ಚುನಾವಣೆಯಲ್ಲಿ ಒಟ್ಟು 751 ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. 8,337 ಅಭ್ಯರ್ಥಿಗಳ ಪ್ರಮಾಣಪತ್ರವನ್ನು ಪರಿಶೀಲಿಸಿದ ಎಡಿಆರ್‌ ಈ ಮಾಹಿತಿ ಕಲೆಹಾಕಿದೆ. ರಾಷ್ಟ್ರೀಯ ಪಕ್ಷಗಳ 1,333 ಅಭ್ಯರ್ಥಿಗಳು  ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಪ್ರಾದೇಶಿಕ ಪಕ್ಷಗಳ 532, ಇತರ ನೋಂದಾಯಿತ ಸಣ್ಣ ಪಕ್ಷಗಳ 2,580 ಅಭ್ಯರ್ಥಿಗಳು ಹಾಗೂ 3,915 ಸ್ವತಂತ್ರ ಸ್ಪರ್ಧಿಗಳು ಕಣದಲ್ಲಿದ್ದಾರೆ.

ಶೇ 9.6 ಮಹಿಳಾ ಅಭ್ಯರ್ಥಿಗಳು: ಈ ಬಾರಿಯ ಚುನಾವಣೆಯಲ್ಲಿ ಒಟ್ಟು ಅಭ್ಯರ್ಥಿಗಳಲ್ಲಿ ಮಹಿಳಾ ಸ್ಪರ್ಧಿಗಳ ಪ್ರಮಾಣ ಶೇ 9.6 ಆಗಿದೆ ಎಂದು ಎಡಿಆರ್‌ ವರದಿ ತಿಳಿಸಿದೆ. 8,337 ಅಭ್ಯರ್ಥಿಗಳಲ್ಲಿ 797 ಮಹಿಳೆಯರು ಇದ್ದಾರೆ. 2009ರ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳ ಪ್ರಮಾಣ ಶೇ 7 ರಷ್ಟಿತ್ತು. 2014 ರಲ್ಲಿ ಶೇ 8 ಹಾಗೂ 2019 ರಲ್ಲಿ ಶೇ 9 ರಷ್ಟು ಮಹಿಳಾ ಸ್ಪರ್ಧಿಗಳು ಇದ್ದರು.

ರಾಷ್ಟ್ರೀಯ ಪಕ್ಷಗಳ 1,333 ಅಭ್ಯರ್ಥಿಗಳಲ್ಲಿ 443 ಮಂದಿ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ 295 ಮಂದಿ ವಿರುದ್ಧ ಗಂಭೀರ ಅಪರಾಧ ಪ್ರಕರಗಳು ಇವೆ. ಪ್ರಾದೇಶಿಕ ಪಕ್ಷಗಳ 532 ಅಭ್ಯರ್ಥಿಗಳಲ್ಲಿ 249 ಮಂದಿ ಮೇಲೆ ಅಪರಾಧ ಪ್ರಕರಣಗಳು ಇವೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT