ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ: ಪರಿಶಿಷ್ಟ ಕುಟುಂಬದ 12 ಸದಸ್ಯರು ಬೌದ್ಧ ಧರ್ಮಕ್ಕೆ ಮತಾಂತರ

Last Updated 22 ಅಕ್ಟೋಬರ್ 2022, 19:31 IST
ಅಕ್ಷರ ಗಾತ್ರ

ಕೋಟಾ (ರಾಜಸ್ಥಾನ):ರಾಜಸ್ಥಾನದ ಬರಲ್ ಜಿಲ್ಲೆಯಲ್ಲಿ ಪರಿಶಿಷ್ಟ ಕುಟುಂಬವೊಂದರ 12 ಸದಸ್ಯರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

ಪರಿಶಿಷ್ಟ ಕುಟುಂಬದ ಸದಸ್ಯರೊಬ್ಬರ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ಮಾಡಿದ್ದರು. ಈ ಸಂಬಂಧ ಪಂಚಾಯಿತಿಯ ಸರಪಂಚರೊಬ್ಬರ ಪತಿಯ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಕ್ಕೆ ಕುಟುಂಬವು ಅಸಮಾಧಾನಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಕುಟುಂಬದ ಸದಸ್ಯರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆಂದು ಹೇಳಲಾಗಿದೆ.

ಭೂಲೊನ್ ಗ್ರಾಮದ ರಾಜೇಂದ್ರ ಎಂಬುವರ ಕುಟುಂಬದ 12 ಸದಸ್ಯರು ಶುಕ್ರವಾರ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಕುಟುಂಬವು ಹಿಂದೂ ಧರ್ಮದ ದೇವರ ವಿಗ್ರಹ ಮತ್ತು ಫೋಟೊಗಳನ್ನುಇಲ್ಲಿನ ನದಿಯಲ್ಲಿ ವಿಸರ್ಜಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜೇಂದ್ರ ಅವರು ಅ. 5ರಂದು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲ್‌ಚಂದ್ ಲೋಧಾ ಎಂಬುವರ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣದ ಅಡಿಯಲ್ಲಿದೂರು ದಾಖಲಿಸಿದ್ದರು. ಬಳಿಕ ಲೋಧಾ ಅವರನ್ನು ಪೊಲೀಸರು ಬಂಧಿಸಿದ್ದರು. ಇದಾದ ಕೆಲ ದಿನಗಳ ಬಳಿಕ ರಾಜೇಂದ್ರ, ಸರಪಂಚರೊಬ್ಬರ ಪತಿ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಪೊಲೀಸರಿಗೆ ಒತ್ತಾಯಿಸಿದ್ದರು.

ಸರಪಂಚರೊಬ್ಬರ ಪತಿಯ ವಿರುದ್ಧ ಸಾಕ್ಷ್ಯಾಧಾರ ದೊರೆತಲ್ಲಿ ಅವರನ್ನು ಬಂಧಿಸಲಾಗುವುದು ಎಂದು ಪೂಜಾ ನಗರದ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT