ಬಿಜಾಪುರ(ಛತ್ತೀಸಗಢ): ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಭೀಕರ ಗುಂಡಿನ ಕಾಳಗದಲ್ಲಿ 12 ನಕ್ಸಲರು ಹತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದರೊಂದಿಗೆ ಈ ತಿಂಗಳು ಹತ್ಯೆ ಮಾಡಲಾದ ನಕ್ಸಲರ ಸಂಖ್ಯೆ 26ಕ್ಕೆ ಏರಿದಂತಾಗಿದೆ.

ಜಿಲ್ಲೆಯ ದಕ್ಷಿಣದಲ್ಲಿರುವ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ನಕ್ಸಲ್ ನಿಗ್ರಹ ಕಾರ್ಯಾಚರಣೆ ಆರಂಭಿಸಿದವು. ಬೆಳಿಗ್ಗೆ 9ರ ವೇಳೆಗೆ ಶುರುವಾದ ಗುಂಡಿನ ಚಕಮಕಿ ಸಂಜೆವರೆಗೂ ನಡೆಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಕಾರ್ಯಾಚರಣೆ ವೇಳೆ, ಭದ್ರತಾ ಪಡೆಗಳ ಸಿಬ್ಬಂದಿಗೆ ಯಾವುದೇ ತೊಂದರೆಯಾಗಿಲ್ಲ ಎಂದೂ ಹೇಳಿದ್ದಾರೆ.

ರಾಜ್ಯ ಪೊಲೀಸ್ನ ಜಿಲ್ಲಾ ಮೀಸಲು ಪಡೆಯ(ಡಿಆರ್ಜಿ) ಮೂರು ಜಿಲ್ಲೆಗಳ ಸಿಬ್ಬಂದಿ, ಸಿಆರ್ಪಿಎಫ್ನ ‘ಕೋಬ್ರಾ’ ಘಟಕದ 5 ಬೆಟಾಲಿಯನ್ ಹಾಗೂ ಸಿಆರ್ಪಿಎಫ್ನ 229ನೇ ಬೆಟಾಲಿಯನ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಜ.12ರಂದು ಜಿಲ್ಲೆಯ ಮಧೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಇಬ್ಬರು ಮಹಿಳೆಯರು ಸೇರಿದಂತೆ ಐವರು ನಕ್ಸಲರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು.

ಕಳೆದ ವರ್ಷ, ಭದ್ರತಾ ಪಡೆಗಳು ನಡೆಸಿದ್ದ ಪ್ರತ್ಯೇಕ ಎನ್ಕೌಂಟರ್ಗಳಲ್ಲಿ 219 ನಕ್ಸಲರ ಹತ್ಯೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.