ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್‌ ಭದ್ರತೆ: ಸಿಐಎಸ್‌ಎಫ್‌ನ 140 ಸಿಬ್ಬಂದಿ ನಿಯೋಜನೆ

Published 23 ಜನವರಿ 2024, 14:19 IST
Last Updated 23 ಜನವರಿ 2024, 14:19 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರೀಯ ಕೈಗಾರಿಕಾ ಮೀಸಲು ಪಡೆಯ (ಸಿಐಎಸ್‌ಎಫ್‌) 140 ಸಿಬ್ಬಂದಿಯನ್ನು ಸಂಸತ್ತಿನ ಭದ್ರತಾ ವ್ಯವಸ್ಥೆಯ ಭಾಗವಾಗಿ ಸಂಸತ್ ಆವರಣದಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜನವರಿ 31ರಿಂದ ಕೇಂದ್ರ ಸರ್ಕಾರದ ಬಜೆಟ್‌ ಅಧಿವೇಶನ ಆರಂಭವಾಗಲಿರುವ ಹಿನ್ನಲೆಯಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ.

ಸಿಐಎಸ್‌ಎಫ್‌ ಸಿಬ್ಬಂದಿ ಸೋಮವಾರದಿಂದಲೇ ಕರ್ತವ್ಯವಹಿಸಿಕೊಂಡಿದ್ದಾರೆ. ಅವರು ಸಂಸತ್‌ ಆವರಣದೊಳಗೆ ಪ್ರವೇಶಿಸುವ ಸಂದರ್ಶಕರು ಮತ್ತು ಅವರ ಬಳಿಯಿರುವ ಚೀಲಗಳ ಪರಿಶೀಲನೆ ನಡೆಸುವರು ಹಾಗೂ ಕಟ್ಟಡಕ್ಕೆ ಅಗ್ನಿ ಸುರಕ್ಷತಾ ವ್ಯವಸ್ಥೆ ಕಲ್ಪಿಸುವರು ಎಂದು ಮೂಲಗಳು ತಿಳಿಸಿವೆ. 

ಇಬ್ಬರು ಯುವಕರು ಕಳೆದ ವರ್ಷ ಡಿಸೆಂಬರ್‌ 13ರಂದು ಲೋಕಸಭೆಯಲ್ಲಿ ಸ್ಮೋಕ್‌ ಕ್ಯಾನ್‌ ಬಳಸಿ ದಾಂಧಲೆ ಎಬ್ಬಿಸಿದ್ದರು. ಈ ಪ್ರಕರಣವು ಸಂಸತ್ತಿಗೆ ಒದಗಿಸಲಾಗಿರುವ ಭದ್ರತೆ ಕುರಿತು ಪ್ರಶ್ನೆಗಳು ಮೂಡುವಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಸಂಸತ್‌ ಭದ್ರತೆಗಾಗಿ ಸಿಐಎಸ್‌ಎಫ್‌ನ 140 ಮಂದಿ ಸಿಬ್ಬಂದಿಯ ವ್ಯವಸ್ಥೆ ಮಾಡಿದೆ.

ತಂಡದಲ್ಲಿ 36 ಮಂದಿ ಅಗ್ನಿವೀರರಿದ್ದಾರೆ. ಸೇನೆಯ ಸಹಾಯಕ ಕಮಾಂಡ್‌ ಶ್ರೇಣಿಯ ಅಧಿಕಾರಿಯು ಈ ತಂಡವನ್ನು ಮುನ್ನಡೆಸಲಿದ್ದಾರೆ. 

ಸಿಐಎಸ್‌ಎಫ್‌ ತಂಡದ ಜೊತೆ ಇತರ ಭದ್ರತಾ ಸಂಸ್ಥೆಗಳೂ ಸಂಸತ್ತಿಗೆ ಭದ್ರತೆ ಒದಗಿಸುವ ಕೆಲಸದಲ್ಲಿ ನಿರತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT