ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಬಾಲಕಿಯ ಮೇಲೆ 6 ತಿಂಗಳಿನಿಂದ ಸಾಮೂಹಿಕ ಅತ್ಯಾಚಾರ: 5 ಆರೋಪಿಗಳ ಬಂಧನ

Last Updated 12 ಫೆಬ್ರುವರಿ 2020, 12:31 IST
ಅಕ್ಷರ ಗಾತ್ರ

ಸೋಲಾಪುರ: ಆರು ತಿಂಗಳಿನಿಂದ 16 ವರ್ಷ ಪ್ರಾಯದ ದಲಿತ ಬಾಲಕಿಯ ಮೇಲೆ 10 ಜನರ ಗುಂಪೊಂದುನಿರಂತರವಾಗಿಸಾಮೂಹಿಕಅತ್ಯಾಚಾರ ನಡೆಸಿದ ಘಟನೆ ಮಹಾರಾಷ್ಟ್ರದಸೋಲಾಪುರದಲ್ಲಿನಡೆದಿದೆ.

ಈ ಪ್ರಕರಣದಲ್ಲಿ 5 ಆರೋಪಿಗಳನ್ನು ಬಂಧಿಸಲಾಗಿದ್ದು ಅವರವಿರುದ್ದಭಾರತೀಯ ದಂಡ ಸಂಹಿತೆ 376–ಡಿ ಅಡಿಯಲ್ಲಿಸಾಮೂಹಿಕಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯತಡೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದುಪೊಲೀಸರುಹೇಳಿದ್ದಾರೆ.

ನಗರದ ದೇವಸ್ಥಾನದ ಹೊರಗಡೆ ಬಾಲಕಿಯೊಬ್ಬಳುಅಳುತ್ತಿರುವುದನ್ನುಗಮನಿಸಿದ ಸ್ಥಳೀಯರು ಪೊಲೀಸರಿಗೆತಿಳಿಸಿದ್ದಾರೆ.

ಬಾಲಕಿಯುಮಾನಸಿಕವಾಗಿ ಜರ್ಜರಿತದ್ದು,ಪೊಲೀಸರುಅವಳಿಗೆಧೈರ್ಯವನ್ನುತುಂಬಿದ ಬಳಿಕ ನಡೆದ ಘಟನೆಯನ್ನು ತಿಳಿಸಿದ್ದಾಳೆ. ಬಳಿಕ 10 ಜನ ಆರೋಪಿಗಳವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಐದು ಜನರನ್ನು ಬಂಧಿಸಿರುವುದಾಗಿಪೊಲೀಸ್ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳಲ್ಲಿ ಕೆಲವರು ಅವಳಿಗೆಪರಿಚಿತರಾಗಿದ್ದರುಎಂದುಸಂತ್ರಸ್ತೆ ಹೇಳಿದ್ದಾರೆ.

ಆರೋಪಿಗಳಲ್ಲಿ ಕೆಲವರು ಆಟೋಚಾಲಕರಾಗಿದ್ದುಬಲಾತ್ಕಾರದಿಂದ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದುಪೊಲೀಸರುತಿಳಿಸಿದ್ದಾರೆ

ವಿಜಾಪುರನಾಕಾಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಉಳಿದಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದುಪೊಲೀಸರುಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT