ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನನ್ನು ಎಲ್ಲರೂ ಪಾಲಿಸಲೇಬೇಕು: ಸಚಿವ ರಾಜೀವ್‌ ಚಂದ್ರಶೇಖರ್‌

ಪೇಟಿಎಂ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಮೇಲೆ ನಿರ್ಬಂಧ ಪ್ರಕರಣ
Published 18 ಫೆಬ್ರುವರಿ 2024, 15:26 IST
Last Updated 18 ಫೆಬ್ರುವರಿ 2024, 15:26 IST
ಅಕ್ಷರ ಗಾತ್ರ

ನವದೆಹಲಿ: ‘ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಮೇಲೆ ಆರ್‌ಬಿಐ ಹೇರಿರುವ ನಿರ್ಬಂಧವು ಇತರೆ ಹಣಕಾಸು ತಂತ್ರಜ್ಞಾನ ಕಂಪನಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ನೆಲದ ಕಾನೂನನ್ನು ಎಂದಿಗೂ ಮೀರಬಾರದು ಎಂಬುದನ್ನು ಈ ಕಂಪನಿಗಳು ಮರೆಯಬಾರದು’ ಎಂದು ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಕುರಿತು ಆರ್‌ಬಿಐ ಕೈಗೊಂಡಿರುವ ನಿರ್ಧಾರವು, ಹಣಕಾಸು ತಂತ್ರಜ್ಞಾನ ಕಂಪನಿಗಳು ತಳಮಳಗೊಳ್ಳುವಂತೆ ಮಾಡಿದೆ ಎಂಬ ವಾದವನ್ನು ಸಚಿವ ರಾಜೀವ್‌ ಅವರು ಅಲ್ಲಗಳೆದರು. ‘ಈ ಇಡೀ ಪ್ರಕರಣವನ್ನು ತಪ್ಪಾಗಿ ಗ್ರಹಿಸಲಾಗುತ್ತಿದೆ. ಭಾರತದ್ದೇ ಕಂಪನಿಯಾಗಿರಲಿ, ವಿದೇಶಿ ಕಂಪನಿಯೇ ಆಗಿರಲಿ ಭಾರತದ ಕಾನೂನನ್ನು ಅನುಸರಿಸಲೇಬೇಕು’ ಎಂದರು.

‘ಒಬ್ಬ ಮಹಾತ್ವಾಕಾಂಕ್ಷಿ ಉದ್ಯಮಿಯು ತನ್ನಲ್ಲಿಯೇ ಅಪಾರ ನಂಬಿಕೆ ಇಡುತ್ತಾನೆ ಮತ್ತು ತನ್ನ ಕಂಪನಿಯನ್ನು ಎತ್ತರಕ್ಕೆ ಕೊಂಡೊಯ್ಯಲು ಶ್ರಮ ಹಾಕುತ್ತಾನೆ. ಆದರೆ, ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬ ನಿಯಮಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲನಾಗುತ್ತಾನೆ. ಅದು ಸಾಮಾಜಿಕ ಜಾಲತಾಣ ಕಂಪನಿಯೇ ಆಗಿರಲಿ ಅಥವಾ ಹಣಕಾಸು ತಂತ್ರಜ್ಞಾನ ಕಂಪನಿಯೇ ಆಗಿರಲಿ, ನಿಯಮಗಳನ್ನು ಮೀರಿ ತಪ್ಪಿಸಿಕೊಳ್ಳಬಹುದು ಎಂಬ ಮನಃಸ್ಥಿತಿ ಮಾತ್ರ ಇಲ್ಲ ಎಂದೇ ಈ ಪ್ರಕರಣವನ್ನು ನಾನು ಅರ್ಥೈಸುತ್ತೇನೆ’ ಎಂದು ಅವರು ಹೇಳಿದರು.

ಹಣಕಾಸು ತಂತ್ರಜ್ಞಾನ ಕಂಪೆನಿಗಳಿಗೆ ಸಂಬಂಧಿಸಿ ನಿಯಮಗಳನ್ನು ರೂಪಿಸುವುದು ಆರ್‌ಬಿಐ. ಆರ್‌ಬಿಐ ಮಾತನ್ನು ಕೇಳಲೇಬೇಕು ಮತ್ತು ಅದರ ನಿಯಮಗಳನ್ನು ಅನುಸರಿಸಲೇ ಬೇಕು
ರಾಜೀವ್‌ ಚಂದ್ರಶೇಖರ್‌ ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT