‘ಟೈಟ್ಲರ್ ಅವರು 1984ರ ನವೆಂಬರ್ 1ರಂದು ಬಿಳಿ ಬಣ್ಣದ ಅಂಬಾಸಿಡರ್ ಕಾರಿನಲ್ಲಿ ಪುಲ್ ಬಂಗಶ್ ಗುರುದ್ವಾರದ ಬಳಿ ಬಂದಿದ್ದರು. ಕಾರಿನಿಂದ ಇಳಿದ ಅವರು ‘ಸಿಖ್ಖರನ್ನು ಕೊಲ್ಲಿರಿ, ಅವರು ನಮ್ಮ ತಾಯಿಯನ್ನು ಕೊಂದಿದ್ದಾರೆ’ ಎಂದು ಹೇಳುವ ಮೂಲಕ ಅಲ್ಲಿದ್ದ ಗುಂಪನ್ನು ಪ್ರಚೋದಿಸಿದ್ದಾರೆ. ಬಳಿಕ ಅಲ್ಲಿ ನಡೆದ ಗಲಭೆಯಲ್ಲಿ ಮೂವರು ಕೊಲ್ಲಲ್ಪಟ್ಟರು’ ಎಂದು ಸಾಕ್ಷಿಯೊಬ್ಬರು ಈ ಹಿಂದೆ ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದರು.