ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1984 ಸಿಖ್ ವಿರೋಧಿ ಗಲಭೆ ಪ್ರಕರಣ: ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಖುಲಾಸೆ

Published 20 ಸೆಪ್ಟೆಂಬರ್ 2023, 13:15 IST
Last Updated 20 ಸೆಪ್ಟೆಂಬರ್ 2023, 13:15 IST
ಅಕ್ಷರ ಗಾತ್ರ

ನವದೆಹಲಿ: 1984ರ ಸಿಖ್‌ ವಿರೋಧಿ ಗಲಭೆ ‍ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್‌ ಕುಮಾರ್‌ ಅವರನ್ನು ಖುಲಾಸೆಗೊಳಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ.

ಪ್ರಕಣದಲ್ಲಿ ಇವರು ಭಾಗಿಯಾಗಿರುವ ಬಗ್ಗೆ ಅನುಮಾನದ ಲಾಭವನ್ನು ನೀಡಿ ಸಜ್ಜನ್‌ ಕುಮಾರ್‌ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಲಾಗಿದೆ.

ವಿಶೇಷ ನ್ಯಾಯಮೂರ್ತಿ ಗೀತಾಂಜಲಿ ಗೋಯಲ್ ಅವರು ಸಜ್ಜನ್‌ ಕುಮಾರ್‌ ಅವರನ್ನು ಖುಲಾಸೆಗೊಳಿಸಿ ಆದೇಶಿಸಿದರು. ಇವರ ಜತೆಗೆ ಇನ್ನಿಬ್ಬರು ಆರೋಪಿಗಳಾದ ಪ್ರಕಾಶ್‌ ಪಿಯಾಲ್ ಹಾಗೂ ಬ್ರಹ್ಮಾನಂದ ಗುಪ್ತಾ ಅವರನ್ನೂ ನ್ಯಾಯಾಲಯ ಮುಕ್ತಗೊಳಿಸಿದೆ.

ಗಲಭೆ ಹಾಗೂ ಕೊಲೆ ‍ಪ್ರಕರಣದಲ್ಲಿ ಇವರಿಬ್ಬರ ಮೇಲೆ ಇರುವ ಆರೋ‍ಪವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಗಲಭೆ ವೇಳೆ ಸುಲ್ತಾನ್‌ಪುರಿಯಲ್ಲಿ ಸುರ್ಜಿತ್‌ ಸಿಂಗ್‌ ಎನ್ನುವ ಸಿಖ್‌ ವ್ಯಕ್ತಿಯ ಕೊಲೆಯಾಗಿತ್ತು.

ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು (153A), ಯಾವುದೇ ಅಪರಾಧಕ್ಕೆ ಕುಮ್ಮಕ್ಕು ನೀಡುವುದು (ಸೆಕ್ಷನ್ 109), ಕೊಲೆ (ಸೆಕ್ಷನ್ 302) ಮತ್ತು ಗಲಭೆ (147) ಸೇರಿ ಭಾರತೀಯ ದಂಡ ಸಂಹಿತೆಯ ಹಲವು ವಿಧಿಯಡಿ ಸಜ್ಜನ್‌ ಕುಮಾರ್‌ ಅವರ ಮೇಲೆ ಪ್ರಕರಣ ದಾಖಲಾಗಿತ್ತು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೊಲೆ ಬಳಿಕ ಸಿಖ್ಖರನ್ನು ಗುರಿಯಾಗಿಸಿ ಗಲಭೆಗಳು ನಡೆದಿದ್ದವು.

ಸಜ್ಜನ್‌ ಕುಮಾರ್‌ ಸದ್ಯ ಸಿಖ್‌ ಗಲಭೆ ಸಂಬಂಧ ದಾಖಲಾಗಿರುವ ಇನ್ನೊಂದು ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT