ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಛತ್ತೀಸಗಢ | ಕಣಿವೆಗೆ ಉರುಳಿದ ವಾಹನ: ಇಬ್ಬರು ಪೊಲೀಸರು ಸಾವು

Published 20 ಜೂನ್ 2024, 13:59 IST
Last Updated 20 ಜೂನ್ 2024, 13:59 IST
ಅಕ್ಷರ ಗಾತ್ರ

ಬಲರಾಮಪುರ (ಛತ್ತೀಸಗಢ): ಛತ್ತೀಸಗಢದ ಬಲರಾಮಪುರ ಜಿಲ್ಲೆಯಲ್ಲಿ ಮಿನಿ ಗೂಡ್ಸ್‌ ವಾಹನವೊಂದು ಕಣಿವೆಗೆ ಉರುಳಿ ಛತ್ತೀಸ್‌ಗಢ ಸಶಸ್ತ್ರ ಪಡೆಯ(ಸಿಎಎಫ್‌) ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ.

ವಾಹನವು ಕಡಿದಾದ ತಿರುವಿನಲ್ಲಿ ಚಲಿಸುವಾಗ, ಚಾಲಕನ ನಿಯಂತ್ರಣ ತಪ್ಪಿ ಆಳದ ಕಣಿವೆಗೆ ಉರುಳಿದೆ. ಈ ವೇಳೆ ಕಾನ್‌ಸ್ಟೆಬಲ್‌ಗಳಾದ ಉತ್ತರ ಪ್ರದೇಶ ಮೂಲದ ಫತೇಹ್‌ ಬಹದ್ದೂರ್‌ ಹಾಗೂ ಛತ್ತೀಸ್‌ಗಢದ ಸರ್‌ಗುಜಾ ಜಿಲ್ಲೆಯ ನಾರಾಯಣ್‌ ಪ್ರಸಾದ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವಾಹನದಲ್ಲಿದ್ದ ಮತ್ತೊಬ್ಬ ಕಾನ್‌ಸ್ಟೆಬಲ್‌ ರಾಪ್ರತಾಪ್‌ ಸಿಂಗ್‌ ಹಾಗೂ ವಾಹನ ಚಾಲಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಲರಾಮಪುರ ಎಸ್‌ಪಿ ಲಾಲ್‌ ಉಮೇದ್‌ ಸಿಂಗ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT