ಕಿಶನ್‌ಗಂಜ್: ಮೊಹರು ಮಾಡಿರುವ ಎಲೆಕ್ಟ್ರಾನಿಕ್ ಮತ ಯಂತ್ರ(ಇವಿಎಂ)ಗಳು ಷಾಹಾಬಾದ್‌ನ ರಸ್ತೆಯಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು. ಈ ಸಂಬಂಧ ಇಬ್ಬರು ಮತಗಟ್ಟೆ ಅಧಿಕಾರಿಗಳನ್ನು ಚುನಾವಣಾ ಆಯೋಗ ಅಮಾನತು ಮಾಡಿದೆ.
ರಾಜಸ್ಥಾನದ ಬರಾನ್ ಜಿಲ್ಲೆಯ ಕಿಶನ್‌ಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆಯಲ್ಲಿ ಇವಿಎಂ(ಕ್ರಮ ಸಂಖ್ಯೆ ಬಿಬಿಯುಎಡಿ41390) ಬಿದ್ದಿರುವುದನ್ನು ಗುರುತಿಸಲಾಗಿತ್ತು. ಕರ್ತವ್ಯದಲ್ಲಿ ನಿರ್ಲಕ್ಷ್ಯಕ್ಕಾಗಿ ಅಧಿಕಾರಿಗಳಾದ ಅಬ್ದುಲ್ ರಫಿಕ್ ಮತ್ತು ನವಾಲ್ ಸಿಂಗ್ ಪತ್ವಾರಿ ಅವರನ್ನು ಅಮಾನತುಗೊಳಿಸಲಾಗಿದೆ.
#WATCH: A ballot unit was found lying on road in Shahabad area of Kishanganj Assembly Constituency in Baran district of Rajasthan yesterday. Two officials have been suspended on grounds of negligence. #RajasthanElections pic.twitter.com/yq7F1mbCFV
— ANI (@ANI) December 8, 2018
ಇವಿಎಂನ್ನು ಸುರಕ್ಷಿತವಾಗಿ ಸ್ಟ್ರಾಂಗ್‌ರೂಂಗೆ ತಲುಪಿಸಲಾಗಿದ್ದು, ಭದ್ರತೆ ಒದಗಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ. ಇವಿಎಂ ಬಹುಶಃ ಟ್ರಕ್‌ನಿಂದ ಜಾರಿ ರಸ್ತೆಗೆ ಉರುಳಿರಬಹುದು ಎಂದು ಜಿಲ್ಲಾಧಿಕಾರಿ ಎಸ್.ಪಿ.ಪ್ರತಿಕ್ರಿಯಿಸಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
Two officials have been suspended in connection with the incident where a ballot unit was found lying on road in Shahabad area of Kishanganj Assembly Constituency in Baran district of Rajasthan. #RajasthanElections pic.twitter.com/FvCOgdkgof
— ANI (@ANI) December 8, 2018
ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿದೆ. ಶೇ 72.7ರಷ್ಟು ಮತದಾನ ನಡೆದಿದ್ದು, 2,274 ಅಭ್ಯರ್ಥಿಗಳು ಫಲಿತಾಂಶ ನೋಡುತ್ತಿದ್ದಾರೆ. ಒಟ್ಟು 52 ಸಾವಿರ ಮತಗಟ್ಟೆಗಳನ್ನು ತೆರೆಯಲಾಗಿತ್ತು, 2 ಲಕ್ಷಕ್ಕೂ ಅಧಿಕ ಇವಿಎಂಗಳು ಹಾಗೂ ವಿವಿಪ್ಯಾಟ್ ಮೆಶಿನ್‌ಗಳನ್ನು ಶುಕ್ರವಾರ ನಡೆದ ಮತದಾನದಲ್ಲಿ ಬಳಸಲಾಗಿತ್ತು. ಡಿಸೆಂಬರ್ 11ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.