ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022: ಅತ್ಯಂತ ಬಿಸಿಯ ಐದನೇ ವರ್ಷ

ವಿಶ್ವ ಹವಾಮಾನ ಸಂಸ್ಥೆ ವರದಿಯಲ್ಲಿ ಉಲ್ಲೇಖ
Published 22 ಏಪ್ರಿಲ್ 2023, 0:59 IST
Last Updated 22 ಏಪ್ರಿಲ್ 2023, 0:59 IST
ಅಕ್ಷರ ಗಾತ್ರ

ಬೆಂಗಳೂರು: ಕೈಗಾರಿಕಾ ಪೂರ್ವಕಾಲದ ಜಾಗತಿಕ ಸರಾಸರಿ ಉಷ್ಣಾಂಶಕ್ಕಿಂತ 2022ರಲ್ಲಿ 1.15 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು ಸರಾಸರಿ ಉಷ್ಣಾಂಶ ದಾಖಲಾಗಿದೆ. 1850ರಿಂದ ಜಾಗತಿಕ ಉಷ್ಣಾಂಶದ ದತ್ತಾಂಶಗಳು ಲಭ್ಯವಿದ್ದು, ಅತಿಹೆಚ್ಚು ಸರಾಸರಿ ಉಷ್ಣಾಂಶ ದಾಖಲಾದ ವರ್ಷಗಳ ಪಟ್ಟಿಯಲ್ಲಿ 2022 ಐದನೇ ಸ್ಥಾನದಲ್ಲಿದೆ. ಜತೆಗೆ 2015ರಿಂದ 2022ರ ನಡುವಣ ಅವಧಿಯು, ಈ 173 ವರ್ಷಗಳಲ್ಲೇ ಅತ್ಯಂತ ಬಿಸಿಯ ಎಂಟು ವರ್ಷಗಳು ಎನಿಸಿವೆ ಎಂದು ವಿಶ್ವ ಹವಾಮಾನ ಸಂಸ್ಥೆ ಹೇಳಿದೆ.

ವಿಶ್ವ ಹವಾಮಾನ ಸಂಸ್ಥೆ ಶುಕ್ರವಾರ ಬಿಡುಗಡೆ ಮಾಡಿರುವ ‘ಜಾಗತಿಕ ತಾಪಮಾನದ ಸ್ಥಿತಿಗತಿ–2022’ ವರದಿಯಲ್ಲಿ ಈ ಮಾಹಿತಿ ಇದೆ. ಪೆಸಿಫಿಕ್ ಸಾಗರದ ಮೇಲ್ಮೈಗೆ ತಣ್ಣೀರಿನ ಪ್ರವಾಹಗಳನ್ನು ತರುವ ಮೂಲಕ, ದಕ್ಷಿಣ ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಅತಿವೃಷ್ಟಿಗೆ ಕಾರಣವಾಗುವ ಎಲ್‌–ನಿನೊ ವಿದ್ಯಮಾನವು 2020ರಲ್ಲಿ ಸಂಭವಿಸಿತ್ತು. ಇದು ಸಾಮಾನ್ಯವಾಗಿ ಆರು–ಏಳು ವರ್ಷಗಳಿಗೆ ಒಮ್ಮೆ ಮರುಕಳಿಸುತ್ತದೆ. ಆದರೆ, 2020ರಿಂದ ಸತತ ಮೂರು ವರ್ಷ ಎಲ್‌–ನಿನೊ ಸಂಭವಿಸಿದೆ. ಸತತ ಎಲ್–ನಿನೊ ಕಾರಣದಿಂದ ವಾತಾವರಣ ತಂಪಾಗಿದ್ದರೂ, 2022ರ ಜಾಗತಿಕ ಸರಾಸರಿ ಉಷ್ಣಾಂಶವು ಅತ್ಯಧಿಕ ಮಟ್ಟದಲ್ಲಿಯೇ ಇತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.

1850ರಿಂದ 1900ರ ನಡುವಣ 50 ವರ್ಷಗಳ ಜಾಗತಿಕ ಸರಾಸರಿ ಉಷ್ಣಾಂಶವನ್ನು (13.9 ಡಿಗ್ರಿ ಸೆಲ್ಸಿಯಸ್‌) ಜಾಗತಿಕ ಉಷ್ಣಾಂಶ ಎಂದು ಪರಿಗಣಿಸಲಾಗುತ್ತದೆ. ಕೈಗಾರಿಕೆ ಮತ್ತು ಅಭಿವೃದ್ಧಿ ಕಾರಣಗಳಿಂದ ಈ ಉಷ್ಣಾಂಶದಲ್ಲಿ ಏರಿಕೆಯಾಗಿದ್ದು, ಆ ಸ್ಥಿತಿಯನ್ನು ಜಾಗತಿಕ ತಾಪಮಾನ ಏರಿಕೆ ಎಂದು ಕರೆಯಲಾಗುತ್ತದೆ. ಈ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ನ ಒಳಗೆ ನಿಯಂತ್ರಿಸಬೇಕು ಎಂಬುದು ಜಾಗತಿಕ ತಾಪಮಾನ ನಿಯಂತ್ರಣದ ಗುರಿಯಾಗಿದೆ. ಈ ಉಷ್ಣಾಂಶದಲ್ಲಿ ಏರಿಕೆಯಾದರೆ, ಅದು ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತದೆ. ಜಾಗತಿಕ ಸರಾಸರಿ ಉಷ್ಣಾಂಶಕ್ಕಿಂತ 2022ರಲ್ಲಿ 1.15 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು ಉಷ್ಣಾಂಶ ದಾಖಲಾದ ಕಾರಣ ವಿಶ್ವದ ಹಲವೆಡೆ ಪ್ರಾಕೃತಿಕ ವಿಕೋಪಗಳು ಸಂಭವಿಸಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT