ಕೋಲ್ಕತ್ತ: ದೀಪಾವಳಿ ಪ್ರಯುಕ್ತ ಮೂವರು ಭಾರತೀಯ ಶಾಸ್ತ್ರೀಯ ಸಂಗೀತಗಾರರು ಭಾನುವಾರ ಇಟಲಿಯ ಐತಿಹಾಸಿಕ ಕ್ವಿರಿನಾಲೆ ಅರಮನೆಯಲ್ಲಿ ಸಂಗೀತ ಕಛೇರಿ ನಡೆಸಿ ಕೊಡುವ ಮೂಲಕ, ಗಮನ ಸೆಳೆದಿದ್ದಾರೆ.
ಕೋಲ್ಕತ್ತ ಮೂಲದ ಶಾಸ್ತ್ರೀಯ ಗಾಯಕ ಸುಪ್ರಿಯೋ ದತ್ತಾ, ಸರೋದ್ ವಾದಕ ಪಾರ್ಥೊ ಸಾರಥಿ ಹಾಗೂ ತಬಲಾ ವಾದಕ ಸಂಜು ಸಹಾಯ್ ಅವರು ಇಟಲಿ ಅಧ್ಯಕ್ಷರ ಅಧಿಕೃತ ನಿವಾಸ ಪೌಲ್ ಚಾಪೆಲ್‌ನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
‘ಇದೊಂದು ಮಹತ್ವದ ಕಾರ್ಯಕ್ರಮವಾಗಿದ್ದು, ಇಂಥ ಸ್ಥಳದಲ್ಲಿ ಪ್ರದರ್ಶನ ನೀಡಲು ಭಾರತದ ಕಲಾವಿದರನ್ನು ಪ್ರಥಮಬಾರಿಗೆ ಆಹ್ವಾನಿಸಲಾಗಿದೆ’ ಎಂದು ಜಾಲತಾಣದಲ್ಲಿ ವಿವರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.