ನವದೆಹಲಿ: ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿಗಳ ಪಟ್ಟಿಗೆ (ವೆಟ್‌ಲ್ಯಾಂಡ್) ಮತ್ತೆ ಭಾರತದ ಮೂರು ಪ್ರದೇಶಗಳು ಸೇರ್ಪಡೆಯಾಗಿವೆ.
ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಬುಧವಾರ ಈ ವಿಷಯ ತಿಳಿಸಿದರು.
ತಮಿಳುನಾಡಿನ ನಂಜರಾಯನ್ ಪಕ್ಷಿಧಾಮ, ಕಾಜುವೇಲಿ ಪಕ್ಷಿಧಾಮ ಹಾಗೂ ಮಧ್ಯಪ್ರದೇಶದ ತಾವಾ ಸಂರಕ್ಷಿತ ಪ್ರದೇಶವನ್ನು ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಮೂಲಕ ಭಾರತದಲ್ಲಿ 85 ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿ ಪ್ರದೇಶಗಳಿವೆ ಎಂದು ಅವರು ತಿಳಿಸಿದರು.