ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ವರ್ಷಗಳಲ್ಲಿ ಹುಲಿ ದಾಳಿಯಿಂದ 302 ಜನರು ಸಾವು: ಮಹಾರಾಷ್ಟ್ರದಲ್ಲಿ ಅತ್ಯಧಿಕ

Published 22 ಡಿಸೆಂಬರ್ 2023, 11:56 IST
Last Updated 22 ಡಿಸೆಂಬರ್ 2023, 11:56 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಒಟ್ಟು 302 ಮಂದಿ ಹುಲಿ ದಾಳಿಯಿಂದ ಮೃತಪಟ್ಟಿದ್ದಾರೆ. ಈ ಪೈಕಿ ಶೇ 55ರಷ್ಟು ಸಾವುಗಳು ಮಹಾರಾಷ್ಟ್ರದಲ್ಲಿಯೇ ಸಂಭವಿಸಿವೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರ ₹29.57 ಕೋಟಿ ನೀಡಿದೆ.

5 ವರ್ಷಗಳ ಅಂಕಿ ಅಂಶ ಹೀಗಿದೆ..
2022ರಲ್ಲಿ 112 ಜನರು ಹುಲಿ ದಾಳಿಯಿಂದ ಮೃತಪಟ್ಟಿದ್ದರು. 2021ರಲ್ಲಿ 59, 2020ರಲ್ಲಿ 51, 2019ರಲ್ಲಿ 49 ಹಾಗೂ 2018 ರಲ್ಲಿ 31 ಜನರು ಸಾವಿಗೀಡಾಗಿದ್ದರು ಎಂದು ಸರ್ಕಾರ ಈ ವಾರದ ಆರಂಭದಲ್ಲಿ ಲೋಕಸಭೆಗೆ ತಿಳಿಸಿದೆ.

ರಾಜ್ಯವಾರು ಮಾಹಿತಿ..

ಈ ಅವಧಿಯಲ್ಲಿ, ಮಹಾರಾಷ್ಟ್ರವೊಂದರಲ್ಲೇ 170 ಸಾವುಗಳು ದಾಖಲಾಗಿದ್ದವು. 2022ರಲ್ಲಿ 85, 2021ರಲ್ಲಿ 32, 2020 ರಲ್ಲಿ 25, 2019ರಲ್ಲಿ 26 ಹಾಗೂ 2018ರಲ್ಲಿ ಇಬ್ಬರು ಮೃತಪಟ್ಟಿದ್ದರು.

ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ 39 ಜನರು ಮೃತಪಟ್ಟಿದ್ದರು. 2022 ಮತ್ತು 2021 ರಲ್ಲಿ ತಲಾ 11 ಮಂದಿ, 2020ರಲ್ಲಿ 4, 2019ರಲ್ಲಿ 8 ಹಾಗೂ 2018ರಲ್ಲಿ ಐವರು ಮೃತಪಟ್ಟಿದ್ದರು.

ದತ್ತಾಂಶಗಳ ಪ್ರಕಾರ ಬಿಹಾರದಲ್ಲಿ ಹುಲಿ ದಾಳಿ ಸಂಬಂಧಿತ ಸಾವು ಕಡಿಮೆ ವರದಿಯಾಗಿವೆ. 2019ರಲ್ಲಿ ಶೂನ್ಯ, 2020ರಲ್ಲಿ ಒಂದು, 2021ರಲ್ಲಿ 4 ಮತ್ತು 2022ರಲ್ಲಿ 9 ಜನರು ಸಾವಿಗೀಡಾಗಿದ್ದರು.

ವಾರ್ಷಿಕ ಶೇ 6ರಷ್ಟು ಏರಿಕೆ

ಭಾರತದಲ್ಲಿ 2018ರಲ್ಲಿ 2,967 ಇದ್ದ ಹುಲಿಗಳ ಸಂಖ್ಯೆ 2022ರ ವೇಳೆಗೆ 3,682ಕ್ಕೆ ಏರಿಕೆಯಾಗಿದೆ. ಈ ವರ್ಷದ ಜುಲೈನಲ್ಲಿ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳ ಪ್ರಕಾರ ವಾರ್ಷಿಕ ಶೇ 6ರಷ್ಟು ಏರಿಕೆಯಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ 50 ಪ್ರತಿಶತ ಹೆಚ್ಚಳದೊಂದಿಗೆ, ಮಧ್ಯಪ್ರದೇಶವು, ದೇಶದಲ್ಲಿ ಗರಿಷ್ಠ ಸಂಖ್ಯೆಯ(785) ಹುಲಿಗಳನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಕರ್ನಾಟಕ (563), ಉತ್ತರಾಖಂಡ (560) ಹಾಗೂ ಮಹಾರಾಷ್ಟ್ರದ (444) ಹುಲಿಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT