ಕಾಸ್ಗಂಜ್ (ಉತ್ತರ ಪ್ರದೇಶ): ಕಾಸ್ಗಂಜ್ನಲ್ಲಿ ನಡೆದಿದ್ದ ಹಿಂಸಾಚಾರದ ವೇಳೆ ಯುವಕನೊಬ್ಬ ಗುಂಡು ಹಾರಿಸುತ್ತಿರುವ ವಿಡಿಯೊ ಬಹಿರಂಗವಾಗಿದೆ. ಕೆಲ ಯುವಕರು ಲಾಠಿ ಮತ್ತು ದೊಣ್ಣೆಗಳನ್ನು ಬೀಸುತ್ತಿರುವ ದೃಶ್ಯವೂ ಇರುವ ವಿಡಿಯೊವನ್ನು ಎನ್ಡಿಟಿವಿ ಪ್ರಕಟಿಸಿದೆ.

ಗಣರಾಜ್ಯೋತ್ಸವ ದಿನದಂದು ನಡೆಸಲಾಗಿದ್ದ ‘ತಿರಂಗಾ ಯಾತ್ರೆ’ಯ ಸಂದರ್ಭದ ವಿಡಿಯೊದಲ್ಲಿ ಚಂದನ್ ಗುಪ್ತಾ (ಹಿಂಸಾಚಾರದಲ್ಲಿ ಮೃತಪಟ್ಟ ಯುವಕ) ಕಾಣಿಸಿಕೊಂಡಿದ್ದರು. ಇದಾದ ನಂತರದ ಕೆಲವೇ ಕ್ಷಣಗಳಲ್ಲಿ ಗಲಭೆ ನಡೆದಿತ್ತು. ಈ ವೇಳೆ ಅನೇಕ ಯುವಕರು ರಾಷ್ಟ್ರಧ್ವಜವನ್ನು ಹಿಡಿದುಕೊಂಡು ‘ಭಾರತ್ ಮಾತಾ ಕಿ ಜೈ’ ಮತ್ತು ‘ವಂದೇ ಮಾತರಮ್’ ಎಂದು ಘೋಷಣೆ ಕೂಗುತ್ತಾ ಬೈಕ್ಗಳಲ್ಲಿ ರ್ಯಾಲಿ ನಡೆಸಿದ್ದು ಒಂದು ವಿಡಿಯೊದಲ್ಲಿ ಕಂಡುಬಂದಿದೆ.

ಮತ್ತೊಂದು ವಿಡಿಯೊಲ್ಲಿ, ಯುವಕನೊಬ್ಬ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಬಹುಶಃ ಈ ಗುಂಡೇಟಿನಿಂದಲೇ ಚಂದನ್ ಗುಪ್ತಾ ಮೃತಪಟ್ಟಿರಬಹುದು ಎಂದು ಕೆಲವು ಮೂಲಗಳು ಅನುಮಾನ ವ್ಯಕ್ತಪಡಿಸಿವೆ. ಲಾಠಿ ಮತ್ತು ದೊಣ್ಣೆ ಬೀಸುತ್ತಾ ಬಂದ ಯುವಕರು ನಂತರ ಬಸ್ಸು, ಕಾರು, ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಸಮೀಪದ ಕಟ್ಟಡವೊಂದರ ಮೇಲಿನಿಂದ ವಿಡಿಯೊ ಚಿತ್ರೀಕರಿಸಲಾಗಿದೆ.

ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಈವರೆಗೆ ಸುಮಾರು 100 ಮಂದಿಯನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.