ಹೈದರಾಬಾದ್: ಐವಿಎಫ್ ಹಾಗೂ ಬಾಡಿಗೆ ತಾಯ್ತನದ ಸೋಗಿನಲ್ಲಿ ನವಜಾತ ಶಿಶುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಹೈದರಾಬಾದ್ ಪೊಲೀಸರು ಭೇದಿಸಿದ್ದಾರೆ.

ಈ ಕೃತ್ಯ ನಡೆಸುತ್ತಿದ್ದ ಆರೋಪದಲ್ಲಿ ಸ್ತ್ರೀರೋಗ ತಜ್ಞೆ ಡಾ.ಪಾಚಿಪಾಲ ನಮ್ರತಾ (64) ಹಾಗೂ ಗೋಪಾಲಪುರಂನಲ್ಲಿ ಯೂನಿವರ್ಸಿಟಿ ಸೃಷ್ಟಿ ಫರ್ಟಿಲಿಟಿ ಸೆಂಟರ್ನ ಕೆಲ ಸಿಬ್ಬಂದಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

2024ರಲ್ಲಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಬಂದಿದ್ದ ದಂಪತಿಯಿಂದ ₹35 ಲಕ್ಷ ಪಡೆದಿದ್ದ ನಮ್ರತಾ, 2025ರಲ್ಲಿ ಅವರಿಗೆ ಮಗುವನ್ನು ನೀಡಿದ್ದಾರೆ. ಆದರೆ, ಮಗುವಿನ ಡಿಎನ್ಎ ಪರೀಕ್ಷೆ ಮಾಡಿದಾಗ ದಂಪತಿಗೆ ಹೋಲಿಕೆಯಾಗಿಲ್ಲ. ಬಳಿಕ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ತನಿಖೆ ವೇಳೆ ನಮ್ರತಾ ಅವರ ಆಸ್ಪತ್ರೆಯಲ್ಲಿ ಗರ್ಭಪಾತಕ್ಕೆ ಮುಂದಾಗುವ ಮಹಿಳೆಯರನ್ನು ಗುರಿಯಾಗಿಸಿ, ಅವರಿಗೆ ಆಮಿಷವೊಡ್ಡಿ ಅವರಿಂದ ಮಗು ಪಡೆದು, ನಂತರ ಬಾಡಿಗೆ ತಾಯ್ತನ ಬಯಸುವ ದಂಪತಿಗೆ ಆ ಮಕ್ಕಳನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.