‘ಪಂಢರಪುರಕ್ಕೆ ಪ್ರವಾಸ ಮಾಡಿದ್ದ ಛಾಟೆ ಅವರು ಜುಲೈ 15ರಂದು ಮನೆಗೆ ಮರಳಿದ್ದರು. ಮರುದಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರ ಕಫದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು, ಆದರೆ ಜುಲೈ 17ರಂದು ಅವರು ಮೃತಪಟ್ಟರು’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಉಲ್ಲಾಸ್ ಗಂಡಲ್ ಅವರು ತಿಳಿಸಿದ್ದಾರೆ.