ಭುವನೇಶ್ವರ್: ಕಳೆದ 10 ವರ್ಷಗಳಲ್ಲಿ ಒಡಿಶಾದಲ್ಲಿ 6,900 ಅರಣ್ಯ ಕಳ್ಳ ಬೇಟೆಗಾರರನ್ನು ಬಂಧಿಸಲಾಗಿದೆ ಎಂದು ಅರಣ್ಯ ಸಚಿವ ಗಣೇಶ್ ರಾಮ್ ವಿಧಾನಸಭೆಗೆ ತಿಳಿಸಿದ್ದಾರೆ.
ಬಂಧಿತರು 2,869 ವನ್ಯಜೀವಿಗಳ ಸಾವಿಗೆ ಕಾರಣರಾಗಿ ಹಣ, ಮಾಂಸದ ಆಸೆಗೆ ವನ್ಯಜೀವಿಗಳನ್ನು ಕೊಂದು ಬೇರೆಡೆ ಸಾಗಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಬಂಧಿತರಿಂದ ವಶಪಡಿಸಿಕೊಂಡಿರುವ ಪ್ರಾಣಿಗಳ ಕೊಂಬು, ಉಗುರು, ಚರ್ಮ, ಇತರೆ ವಸ್ತುಗಳನ್ನು ಅರಣ್ಯ ಇಲಾಖೆಯ ಸುಪರ್ಧಿಯಲ್ಲಿ ಸುರಕ್ಷಿತವಾಗಿ ಇಡಲಾಗಿದೆ ಎಂದು ತಿಳಿಸಿದ್ದಾರೆ.
ಕಳ್ಳಬೇಟೆ ತಡೆಯಲು ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಸೇರಿ ಜಾಯಿಂಟ್ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಇದರಿಂದ ಕಳ್ಳಬೇಟೆಗಳನ್ನು ಮಟ್ಟಹಾಕಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಅರಣ್ಯ ಹಾಗೂ ವನ್ಯಜೀವಿ ಸಂಬಂಧ ದೂರು ನೀಡಲು ಒಡಿಶಾ ಅರಣ್ಯ ಇಲಾಖೆ 24X7 ಸಹಾಯವಾಣಿ ತೆರೆದಿದೆ ಎಂದು ಗಣೇಶ್ ರಾಮ್ ತಿಳಿಸಿದ್ದಾರೆ.