ನವದೆಹಲಿ (ಪಿಟಿಐ): ಏಳನೇ ವೇತನ ಆಯೋಗದ ಶಿಫಾರಸಿಗೆ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ಒಟ್ಟಾರೆ ವೇತನ ಶೇಕಡ 23.5ರಷ್ಟು ಏರಿಕೆಯಾಗಲಿದೆ.
ಆಯೋಗವು ಕೇಂದ್ರ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಶೇಕಡ 14.27ರಷ್ಟು ಹೆಚ್ಚಳ ಸೇರಿದಂತೆ ಒಟ್ಟಾರೆ ಶೇಕಡ 23.5ರಷ್ಟು ಏರಿಕೆಗೆ ಶಿಫಾರಸು ಮಾಡಿತ್ತು.
2017ರ ಜನವರಿ 1ರಿಂದ ಪರಿಷ್ಕೃತ ವೇತನ ಜಾರಿಗೆ ಬರಲಿದೆ. 50 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಸುಮಾರು 58 ಲಕ್ಷ ಪಿಂಚಣಿದಾರರಿಗೆ ಹೊಸ ವೇತನ ವ್ಯವಸ್ಥೆಯ ಪ್ರಯೋಜನ ಸಿಗಲಿದೆ.