ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತಪಟ್ಟವರ ಕುಟುಂಬ ಸಂಪರ್ಕಿಸಲು ನೆರವಾಗಿ: ಸುಷ್ಮಾ ಸ್ವರಾಜ್

Last Updated 11 ಮಾರ್ಚ್ 2019, 5:22 IST
ಅಕ್ಷರ ಗಾತ್ರ

ನವದೆಹಲಿ: ಕೀನ್ಯಾದ ನೈರೋಬಿಗೆ ಹೊರಟಿದ್ದ ಇಥಿಯೋಪಿಯನ್ ಏರ್‌ಲೈನ್ಸ್‌ ಬೋಯಿಂಗ್–737 ವಿಮಾನ ಪತನದಲ್ಲಿ ಇಲ್ಲಿನಪರಿಸರ ಸಚಿವಾಲಯಕ್ಕೆ ಸೇರಿದವಿಶ್ವಸಂಸ್ಥೆಗೆ ಸಲಹೆಗಾರ್ತಿಯಾಗಿರುವ ಶಿಖಾ ಗಾರ್ಗ್‌ ಸೇರಿ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಸ್ಪಷ್ಟಪಡಿಸಿದ್ದಾರೆ.

ವಿಮಾನದಲ್ಲಿದ್ದ 149 ಮಂದಿ ಪ್ರಯಾಣಿಕರು ಮತ್ತು 8 ಮಂದಿ ವಿಮಾನದ ಸಿಬ್ಬಂದಿಯೂ ಮೃತಪಟ್ಟಿದ್ದಾರೆ ಎಂದು ಇಥಿಯೋಪಿಯನ್ ಏರ್‌ಲೈನ್ಸ್‌ ತಿಳಿಸಿದೆ.ವೈದ್ಯ ಪನ್ನಗೇಶ್ ಭಾಸ್ಕರ್‌, ವೈದ್ಯ ಹನ್ಸಿನ್ ಅನಘೇಶ್‌, ನುಕವರಪು ಮನೀಷಾ, ಶಿಖಾ ಗಾರ್ಗ್‌ ಮೃತಪಟ್ಟ ಭಾರತೀಯರು.ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವುದಕ್ಕಾಗಿಶಿಖಾ ಗಾರ್ಗ್‌ ನೈರೋಬಿಗೆ ಪ್ರಯಾಣಿಸುತ್ತಿದ್ದರು.

‘ವಿಮಾನ ಪತನದ ಸುದ್ದಿ ಕೇಳಿ ಬೇಸರವಾಗಿದೆ. ಈ ದುರಂತದಲ್ಲಿ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ. ಮೃತಪಟ್ಟವರ ಕುಟುಂಬದವರಿಗೆ ಎಲ್ಲಾ ರೀತಿಯ ಸಹಾಯ, ನೆರವು ನೀಡುವಂತೆ ಇಥಿಯೋಪಿಯದಲ್ಲಿನ ಭಾರತೀಯ ಹೈಕಮಿಷನರ್‌ಗೆ ಕೇಳಿದ್ದೇನೆ’ ಎಂದು ಸುಷ್ಮಾ ಸ್ವರಾಜ್‌ ಟ್ವೀಟ್‌ ಮಾಡಿದ್ದಾರೆ.

‘ಶಿಖಾ ಗಾರ್ಗ್‌ ಅವರ ಕುಟುಂಬದವರನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸುತ್ತಿದ್ದೇವೆ. ಅವರ ಪತಿಗೆ ಸಾಕಷ್ಟು ಬಾರಿ ಕರೆ ಮಾಡಿದ್ದೇವೆ ಆದರೆ, ಸಂಪರ್ಕ ಸಾಧ್ಯವಾಗಿಲ್ಲ. ದಯವಿಟ್ಟು ಅವರ ಕುಟುಂಬ ಸಂಪರ್ಕಿಸಲು ನೆರವಾಗಿ’ ಎಂದು ಸುಷ್ಮಾ ಸ್ವರಾಜ್‌ ಸೋಮವಾರ ಬೆಳಿಗ್ಗೆ ಟ್ವೀಟ್‌ ಮಾಡಿದ್ದಾರೆ.

‘ವಿಮಾನ ಪತನದಲ್ಲಿ ಮೃತಪಟ್ಟ ನಾಲ್ವರು ಕುಟುಂಬದವರಿಗೆ ಸಂತಾಪ ಸೂಚಿಸುತ್ತೇನೆ. ನನ್ನ ಸಚಿವಾಲಯದ ಸಿಬ್ಬಂದಿಯಾಗಿದ್ದ ಶಿಖಾ ಅವರೂ ಇದರಲ್ಲಿ ಮೃತಪಟ್ಟಿದ್ದು, ಬೇಸರವಾಗಿದೆ’ ಎಂದು ಸಚಿವ ಹರ್ಷವರ್ಧನ್‌ ಟ್ವೀಟಿಸಿದ್ದಾರೆ.

ಬೆಳಿಗ್ಗೆ 8.38ಕ್ಕೆಆಡಿಸ್ ಅಬಾಬಾದಿಂದ ಹೊರಟ ವಿಮಾನ 6 ನಿಮಿಷಗಳ ನಂತರ ಸಂಪರ್ಕ ಕಡಿಗೊಂಡಿದೆ. 60 ಕಿ.ಮೀ ದೂರದ ಬಯಲಿನಲ್ಲಿ ಪತನವಾಗಿದೆ ಎಂದು ಏರ್‌ಲೈನ್ಸ್‌ ವಿವರಿಸಿದೆ. ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅವರು ಘಟನೆಗೆ ಟ್ವಿಟರ್‌ನಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT