ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಸ್ಪೀಕರ್‌ ಹುದ್ದೆಗೆ ಬೇಡಿಕೆ ಸಲ್ಲಿಸಲು TDPಗೆ ಆದಿತ್ಯ ಠಾಕ್ರೆ ಸಲಹೆ

Published 7 ಜೂನ್ 2024, 9:41 IST
Last Updated 7 ಜೂನ್ 2024, 9:41 IST
ಅಕ್ಷರ ಗಾತ್ರ

ಮುಂಬೈ: ‘ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಲ್ಲಿ ತೆಲುಗು ದೇಶಂ ಪಾರ್ಟಿ (TDP) ಹಾಗೂ ಸಂಯುಕ್ತ ಜನತಾ ದಳ (JDU) ಪಾತ್ರ ಮಹತ್ವದ್ದು. ಹೀಗಾಗಿ ಲೋಕಸಭಾ ಸ್ಪೀಕರ್‌ ಹುದ್ದೆಗೆ ಈ ಪಕ್ಷಗಳು ಬೇಡಿಕೆ ಇಡಬೇಕು’ ಎಂದು ಶಿವಸೇನೆಯ (ಯುಬಿಟಿ) ಮುಖಂಡ ಆದಿತ್ಯ ಠಾಕ್ರೆ ಶುಕ್ರವಾರ ಹೇಳಿದ್ದಾರೆ.

ಮೈಕ್ರೊ ಬ್ಲಾಗಿಂಗ್ ಎಕ್ಸ್‌ನಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, ‘ಬಿಜೆಪಿ ಒಮ್ಮೆ ಸರ್ಕಾರ ರಚಿಸಿದ ನಂತರ, ಒಕ್ಕೂಟದಲ್ಲಿರುವ ಪಕ್ಷಗಳನ್ನು ಒಡೆಯಲು ಯತ್ನಿಸುತ್ತದೆ. ಹೀಗಾಗಿ, ಒಕ್ಕೂಟದಲ್ಲಿರುವ ಪಕ್ಷಗಳು ಸಾಧ್ಯವಾದಷ್ಟು ಸ್ಪೀಕರ್ ಹುದ್ದೆಗೇ ಬೇಡಿಕೆ ಇಡಿ’ ಎಂದು ಸಲಹೆ ನೀಡಿದ್ದಾರೆ.

‘ಶಿವಸೇನೆ ಹಾಗೂ ಎನ್‌ಸಿಪಿಗಳನ್ನು ಒಡೆಯಲು ಬಿಜೆಪಿ ಇದೇ ರೀತಿಯ ತಂತ್ರಗಾರಿಕೆಯನ್ನು ಬಳಸಿತ್ತು. ಬಿಜೆಪಿಯ ಇಂಥ ತಂತ್ರಗಳ ಅನುಭವನನ್ನು ಹಂಚಿಕೊಳ್ಳುತ್ತಿದ್ದೇವೆ. ಸರ್ಕಾರ ಸ್ಥಾಪಿಸಿದ ಮರುಕ್ಷಣವೇ ಅವರು ತಮ್ಮ ವಾಗ್ದಾನ ಮರೆಯುತ್ತಾರೆ. ಪಕ್ಷಗಳನ್ನು ವಿಭಜಿಸುತ್ತಾರೆ. ಇವೆಲ್ಲವೂ ಈ ಹಿಂದೆಯೂ ನಿಮ್ಮ ಅನುಭವಕ್ಕೂ ಬಂದಿರಬಹುದು’ ಎಂದು ಹೇಳಿರುವ ಠಾಕ್ರೆ, ಟಿಡಿಪಿ ಮತ್ತು ಜೆಡಿಯುವನ್ನೂ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.

ಸರ್ಕಾರ ರಚಿಸಲು ಬಿಜೆಪಿಗೆ ಬಹುಮತದ ಕೊರತೆ ಎದುರಾಗಿತ್ತು. ಈ ಸಂದರ್ಭದಲ್ಲಿ ಟಿಡಿಪಿ ಹಾಗೂ ಜೆಡಿಯು ಬೆಂಬಲ ಪಡೆದಿದೆ. ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಲು ಈ ಎರಡೂ ಪಕ್ಷಗಳು ನೆರವಾಗಿವೆ. 

ಎನ್‌ಡಿಎ ಹೊಂದಿರುವ ಒಟ್ಟು ಸಂಖ್ಯಾಬಲ 293. ಇದರಲ್ಲಿ ಬಿಜೆಪಿ 240 ಸ್ಥಾನಗಳನ್ನು ಪಡೆದರೆ, ಟಿಡಿಪಿ 16 ಹಾಗೂ ಜೆಡಿಯು 12 ಸ್ಥಾನಗಳೊಂದಿಗೆ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT