ನವದೆಹಲಿ: ಆಮ್ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಬುಧವಾರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವುದಕ್ಕೂ ಮೊದಲು, ಕೇಜ್ರಿವಾಲ್ ತಮ್ಮ ಪತ್ನಿ ಸುನಿತಾ ಅವರೊಂದಿಗೆ ಆಂಜನೇಯ ಮತ್ತು ವಾಲ್ಮೀಕಿ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಂತರ ಅವರು ಪಕ್ಷದ ಕಚೇರಿಯಿಂದ ನವದೆಹಲಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ 'ಪಾದಯಾತ್ರೆ' ನಡೆಸಿ ನಾಮಪತ್ರ ಸಲ್ಲಿಸಿದರು.

'ಪಾದಯಾತ್ರೆ'ಯಲ್ಲಿ ಸಾವಿರಾರು ಜನ ಎಎಪಿ ಕಾರ್ಯಕರ್ತರು ಭಾಗವಹಿಸಿದ್ದರು.

ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು ಜನರಲ್ಲಿ ಕೆಲಸದ ಆಧಾರದ ಮೇಲೆ ಮತ ಹಾಕಲು ಕೇಳುತ್ತಿದ್ದೇನೆ, ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ಇದೆ ಎಂದರು.

ಇದೇ ವೇಳೆ ವಿರೋಧ ಪಕ್ಷ ಬಿಜೆಪಿ ವಿರುದ್ಧ ಅವರು ಟೀಕೆ ಮಾಡಿದರು.
.ದೆಹಲಿ ವಿಧಾನಸಭಾ ಚುನಾವಣೆ: ಕೇಜ್ರಿವಾಲ್ ನವದೆಹಲಿ, ಅತಿಶಿ ಕಲ್ಕಾಜಿಯಿಂದ ಸ್ಪರ್ಧೆ.ದೆಹಲಿ ವಿಧಾನಸಭಾ ಚುನಾವಣೆ: 70 ಅಭ್ಯರ್ಥಿಗಳ ಘೋಷಿಸಿದ ಎಎಪಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.