ಮೀರತ್: ನರ್ಸ್ ಮೇಲಿನ ಆ್ಯಸಿಡ್ ದಾಳಿ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮಹೇಂದ್ರ ಕುಮಾರ್ ಅಲಿಯಾಸ್ ಮಹೇಂದ್ರ ಪ್ರಜಾಪತಿ ಬಂಧಿತ.

ಸೆಪ್ಟೆಂಬರ್ 23ರಂದು ನರ್ಸ್ ರುಕ್ಸಾನ್ (38) ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಆರೋಪಿಯು ಈ ಕೃತ್ಯ ಎಸಗಲು ಕಾನೂನಿನ ಎದುರು ಸಂರ್ಘಷಕ್ಕೆ ಒಳಗಾದ ಬಾಲಕನನ್ನು ಬಳಸಿಕೊಂಡಿದ್ದ. ₹2,000 ನೀಡಿ ಕೃತ್ಯ ಎಸಗುವಂತೆ ಪ್ರಚೋದಿಸಿದ್ದ ಎಂದು ಲೋಹಿಯಾ ಪೊಲೀಸ್ ಠಾಣಾಧಿಕಾರಿ ಅಂತರಿಕ್ಷ್ ಜೈನ್ ತಿಳಿಸಿದ್ದಾರೆ.

ಕೃತ್ಯ ನಡೆದ ದಿನದಂದೇ ಕಾನೂನಿನದ ಎದುರು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿತ್ತು. ತಲೆಮರೆಸಿಕೊಂಡಿದ್ದ ಮಹೇಂದ್ರನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಲು ಯತ್ನಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.