ನವದೆಹಲಿ: ಉತ್ತರ ಪ್ರದೇಶ ಗೋರಖಪುರ್ ಸಂಸದ ಹಾಗೂ ನಟ ರವಿ ಕಿಶನ್ ಅವರು ಕಾಂಗ್ರೆಸ್ ಕುರಿತು ನೀಡಿರುವ ಹೇಳಿಕೆ ವ್ಯಾಪಕ ಚರ್ಚೆಗೆ ಒಳಗಾಗಿರುವ ಬೆನ್ನಲ್ಲೇ ಕಾಂಗ್ರೆಸ್ನ ಅನೇಕ ನಾಯಕರು ರವಿ ಕಿಶನ್ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ‘ಆಜ್ ತಕ್’ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ರವಿ ಕಿಶನ್ ಅವರಿಗೆ ಸಂದರ್ಶಕರು, ನಾಲ್ಕು ಮಕ್ಕಳ ತಂದೆಯಾಗಿರುವ ನೀವೇ (ರವಿ ಕಿಶನ್) ಲೋಕಸಭೆಯಲ್ಲಿ ಜನಸಂಖ್ಯಾ ನಿಯಂತ್ರಣ ಖಾಸಗಿ ಮಸೂದೆಯನ್ನು ಮಂಡಿಸಲು ಹೊರಟಿರುವುದು ತಮಾಷೆಯಾಗಿ ಕಾಣಿಸುವುದಿಲ್ಲವೇ? ಎಂದು ಕೇಳಿದ್ದರು.

ಇದಕ್ಕೆ ಉತ್ತರಿಸಿದ್ದ ರವಿ ಕಿಶನ್, ‘ನನಗೆ ನಾಲ್ಕು ಮಕ್ಕಳಿರುವುದು ನನ್ನ ತಪ್ಪಲ್ಲ. ಅದಕ್ಕೆ ಕಾರಣ ಕಾಂಗ್ರೆಸ್’ ಎಂದು ನೇರವಾಗಿ ಹೇಳಿದ್ದರು.

ಮುಂದುವರೆದು ಮಾತನಾಡಿದ ಅವರು, ‘ಕಾಂಗ್ರೆಸ್ ಆಗ ಜನಸಂಖ್ಯಾ ನಿಯಂತ್ರಣ ಕಾಯ್ದೆ ತರಲಿಲ್ಲ. ಇದರಿಂದ ನಾನು ನಾಲ್ಕು ಮಕ್ಕಳನ್ನು ಹೊಂದುವಂತಾಯಿತು. ಒಂದು ವೇಳೆ ತಂದಿದ್ದರೆ ನನಗೂ ಎರಡು ಮಕ್ಕಳಿರುತ್ತಿದ್ದವು’ ಎಂದಿದ್ದರು.

ರವಿ ಕಿಶನ್ ಅವರ ಈ ಹೇಳಿಕೆ ಭಾರೀ ಟ್ರೋಲ್ ಆಗಿದ್ದು, ‘ನೋಡಿ ಬಿಜೆಪಿಗರು ಎಲ್ಲದ್ದಕ್ಕೂ ಕಾಂಗ್ರೆಸ್ನ್ನು ದೂರುವುದರ ಉದಾಹರಣೆ ಇದು’ ಎಂದು ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದ್ದು, ‘ಎಲ್ಲದಕ್ಕೂ ಕಾಂಗ್ರೆಸ್ಸನ್ನೇ ಹೊಣೆ ಮಾಡುತ್ತಿದ್ದ ಬಿಜೆಪಿಗರು ಈಗ ತಮ್ಮ ಮನೆಯ ಖಾಸಗಿ ವಿಚಾರಗಳಿಗೂ ಕಾಂಗ್ರೆಸ್ಸನ್ನೇ ಹೊಣೆ ಮಾಡಿದ್ದಾರೆ.ಬಿಜೆಪಿಗರಿಗೆ ಮಕ್ಕಳು ಹುಟ್ಟುವುದಕ್ಕೂ ಕಾಂಗ್ರೆಸ್ಸೇ ಕಾರಣ,ಮಕ್ಕಳು ಹುಟ್ಟದಿರುವುದಕ್ಕೂ ಕಾಂಗ್ರೆಸ್ಸೇ ಕಾರಣ!ಮತಿಗೇಡಿ ಬಿಜೆಪಿಗರಿಂದ ಇನ್ನೂ ಯಾವ ಹೊಣೆಗಾರಿಕೆಯನ್ನು ಕಾಂಗ್ರೆಸ್ ಹೊರಬೇಕಿದೆಯೋ! ಎಂದು ವ್ಯಂಗ್ಯವಾಡಿದೆ.

2024ಕ್ಕೆ ಕೇಂದ್ರದಲ್ಲಿ ಪರ್ಯಾಯ ಸರ್ಕಾರ ತರಲು ವಿಪಕ್ಷಗಳಿಂದ ಶ್ರಮ: ಅಖಿಲೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.