ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ದಾಸ್ತಾನಿನ ಮಾಹಿತಿ ಹಂಚಿಕೆ ದುರುಪಯೋಗ ತಡೆಯಲು ಅನುಮತಿ ಕಡ್ಡಾಯ

Last Updated 10 ಜೂನ್ 2021, 10:41 IST
ಅಕ್ಷರ ಗಾತ್ರ

ನವದೆಹಲಿ: ಲಸಿಕೆಯ ದಾಸ್ತಾನು, ಅವುಗಳ ಸಂಗ್ರಹಕ್ಕಾಗಿ ನಿಗದಿ ಮಾಡಿರುವ ತಾಪಮಾನ ಕುರಿತ ಮಾಹಿತಿಯನ್ನು ಇತರ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವ ಮುನ್ನ ಅನುಮತಿ ಪಡೆಯಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಗುರುವಾರ ಸೂಚಿಸಿದೆ.

ಈ ಮಾಹಿತಿಯ ದುರ್ಬಳಕೆಯನ್ನು ತಡೆಗಟ್ಟುವ ಸಲುವಾಗಿ ಈ ಕ್ರಮ ಅಗತ್ಯ ಎಂದೂ ಸಚಿವಾಲಯ ಪ್ರತಿಪಾದಿಸಿದೆ.

‘ಎಲೆಕ್ಟ್ರಾನಿಕ್‌ ವ್ಯಾಕ್ಸಿನ್ ಇಂಟೆಲಿಜೆನ್ಸ್‌ ನೆಟ್‌ವರ್ಕ್‌’ (ಇ–ವಿನ್‌)ನಲ್ಲಿನ ಮಾಹಿತಿಯನ್ನು ಹಂಚಿಕೊಳ್ಳದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂಬ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಸಚಿವಾಲಯ ಈ ಸೂಚನೆ ನೀಡಿದೆ.

ಅಲ್ಲದೇ, ‘ಲಸಿಕೆ ಕುರಿತ ಮಾಹಿತಿ ಬಹಳ ಸೂಕ್ಷ್ಮವಾದದ್ದು. ಲಸಿಕೆ ಕಾರ್ಯಕ್ರಮದ ಸುಧಾರಣೆಗೆ ಮಾತ್ರ ಈ ಮಾಹಿತಿಯನ್ನು ಬಳಸಿಕೊಳ್ಳಬೇಕು. ಆದರೆ, ಕೆಲವು ಸಂಸ್ಥೆಗಳು ಈ ಮಾಹಿತಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮಾಹಿತಿ ಹಂಚಿಕೆಗೂ ಮುನ್ನ ಅನುಮತಿ ಪಡೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಸಚಿವಾಲಯ ಸ್ಪಷ್ಟೀಕರಣ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT