ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ | ಚುನಾವಣೆ ನಂತರ ಸಿಎಂ ಚೌಹಾಣ್‌ಗೆ ಜನರ ವಿದಾಯ: ಕಮಲ್‌ನಾಥ್‌

Published 12 ನವೆಂಬರ್ 2023, 11:03 IST
Last Updated 12 ನವೆಂಬರ್ 2023, 11:03 IST
ಅಕ್ಷರ ಗಾತ್ರ

ಭೋಪಾಲ್‌: ಮುಂಬರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ನಂತರ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ರಾಜ್ಯದ ಜನರು ವಿದಾಯ ಹೇಳುತ್ತಾರೆ ಎಂದು ಕಾಂಗ್ರೆಸ್‌ ನಾಯಕ ಕಮಲ್‌ ನಾಥ್‌ ಹೇಳಿದ್ದಾರೆ.

ಸಾಗರ ಜಿಲ್ಲೆಯ ರೆಹ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಮಲ್‌ನಾಥ್‌, ‘ಹಣ, ಪೊಲೀಸ್‌ ಮತ್ತು ಅಧಿಕಾರದಿಂದ ನಡೆಯುತ್ತಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇನ್ನೂ ಕೇವಲ ನಾಲ್ಕು ದಿನಗಳು ಮಾತ್ರ ಉಳಿದಿದೆ. ವಿಧಾನಸಭೆ ಚುನಾವಣೆಯ ನಂತರ ಮಧ್ಯಪ್ರದೇಶದ ಜನರು ಚೌಹಾಣ್‌ ಅವರಿಗೆ ಬೀಳ್ಕೊಡುಗೆ ನೀಡಲಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಶಿವರಾಜ್‌ ಸಿಂಗ್‌ ಅವರು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡ ನಂತರ ನಿರುದ್ಯೋಗಿಯಾಗುವುದಿಲ್ಲ. ಏಕೆಂದರೆ, ಅವರು ಉತ್ತಮ ನಟ. ಅವರು ನಟನಾ ಪ್ರವೃತ್ತಿಯನ್ನು ಮುಂದುವರಿಸಲು ಮುಂಬೈಗೆ ತೆರಳುತ್ತಾರೆ ಮತ್ತು ಮಧ್ಯಪ್ರದೇಶಕ್ಕೆ ಕೀರ್ತಿಯನ್ನು ತರುತ್ತಾರೆ’ ಎಂದು ನಾಥ್‌ ಟೀಕಿಸಿದ್ದಾರೆ.

‘ಸಿಎಂ ಚೌಹಾಣ್‌ ಅವರು ರಾಜ್ಯದ ಯುವಕರಿಗೆ ಒಂದು ಲಕ್ಷ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಅದು ಸಾಧ್ಯವಾಗಿಲ್ಲ, ಕೊನೆಯದಾಗಿ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನಾದರೂ ಅವರು ಭರ್ತಿ ಮಾಡಬೇಕಿತ್ತು. ಕಳೆದ 18 ವರ್ಷಗಳಿಂದ ಬಿಜೆಪಿಯು ರಾಜ್ಯವನ್ನು ಹಾಳು ಮಾಡಿದೆ. ಮುಂಬರುವ ಚುನಾವಣೆಯು ಮಧ್ಯಪ್ರದೇಶದ ಭವಿಷ್ಯಕ್ಕಾಗಿ ನಡೆಯುತ್ತದೆಯೇ ಹೊರತು, ಯಾವುದೇ ಅಭ್ಯರ್ಥಿಯದ್ದರಾಗಿರುವುದಿಲ್ಲ’ ಎಂದು ಕಮಲ್‌ ನಾಥ್‌ ವಾಗ್ದಾಳಿ ನಡೆಸಿದರು.

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯು ನವೆಂಬರ್‌ 17ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT