ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್ ಮಾಲೀಕನೊಂದಿಗೆ ವಾಗ್ವಾದ: ದಲಿತ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ

Last Updated 4 ನವೆಂಬರ್ 2019, 11:44 IST
ಅಕ್ಷರ ಗಾತ್ರ

ಅಹಮದಾಬಾದ್: ಇಲ್ಲಿನ ಸಬರ್‌ಮತಿ ಟೋಲ್ ನಾಕಾ ಪ್ರದೇಶದ ರಸ್ತೆ ಬದಿಯಲ್ಲಿರುವ ಹೋಟೆಲ್ ಮಾಲೀಕರೊಂದಿಗೆ ಜಗಳವಾಡಿದ್ದಕ್ಕೆ ದಲಿತ ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ ನಡೆಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ತೀವ್ರ ಹಲ್ಲೆಗೊಳಗಾಗಿರುವ ಆ ವ್ಯಕ್ತಿಯನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ದಿಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ವ್ಯಕ್ತಿಯ ಜತೆಗಿದ್ದ ಇನ್ನೊಬ್ಬ ವ್ಯಕ್ತಿಗೂ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿಲ್ಲ.

ಪೊಲೀಸರ ಪ್ರಕಾರ ಭಾನುವಾರ ಸಂಜೆ 7.30ರ ಹೊತ್ತಿಗೆ ಈ ಘಟನೆ ನಡೆದಿದೆ. ಪ್ರಗ್ನೇಶ್ ಪಾರ್ಮರ್ ಮತ್ತು ಜಯೇಶ್ ಎಂಬವರು ಹೋಟಲ್‌ಗೆ ಬಂದಿದ್ದು, ಹೋಟೆಲ್ ಮಾಲೀಕ ಮತ್ತು ಪ್ರಗ್ನೇಶ್ ನಡುವೆ ವಾಗ್ವಾದವುಂಟಾಗಿತ್ತು. ಇದಾದನಂತರ ಜನರ ಗುಂಪೊಂದು ಈ ಯುವಕರ ಮೇಲೆ ಹಲ್ಲೆ ನಡಸಿದೆ.ಹಲ್ಲೆ ನಡೆಸಿದ ವ್ಯಕ್ತಿಗಳಾದ ಮಹೇಶ್ ಥಕೋರೆ ಮತ್ತು ಶಂಕರ್ ಥಕೋರೆ ವಿರುದ್ಧಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೋಟೆಲ್ ಮಾಲೀಕ ಮಹೇಶ್ ಅವರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಸಬರ್‌ಮತಿ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಅಧಿಕಾರಿಆರ್. ಎಚ್. ವಾಲಾ ಹೇಳಿದ್ದಾರೆ.

ಪ್ರಕರಣದ ಬಗ್ಗೆ ದಿಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡಿದ ಅಹಮದಾಬಾದ್‌‌ನ ಸಾಮಾಜಿಕ ಕಾರ್ಯಕರ್ತ ಮೇತುಲ್, ಮಹೇಶ್ ಅವರು ಸಬರ್‌ಮತಿ ಟೋಲ್ ನಾಕಾ ಬಳಿ ವಾಸವಾಗಿದ್ದಾರೆ. ಪ್ರಗ್ನೇಶ್ ಮತ್ತು ಮಹೇಶ್ ನಡುವೆ ವಾಗ್ವಾದವುಂಟಾಗಿದ್ದು, ಪ್ರಗ್ನೇಶ್ ಮೇಲೆ ಹಲ್ಲೆ ನಡೆದಿದೆ. ಅವರನ್ನು ಭಾನುವಾರ ರಾತ್ರಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.

ಆರೋಪಿಗಳನ್ನು 24 ಗಂಟೆಗಳೊಳಗೆ ಬಂಧಿಸದಿದ್ದರೆ ದಲಿತ ಕಾರ್ಯಕರ್ತರು ಅಹಮದಾಬಾದ್ ಬಂದ್‌ಗೆ ಕರೆ ನೀಡಲಿದ್ದಾರೆ ಎಂದು ವಡಗಾಂಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.

ಗುಜರಾತಿನಲ್ಲಿಗುಂಪುಹಲ್ಲೆ ಸಂಸ್ಕೃತಿ ಮುಂದುವರಿಯಲು ನಾವು ಬಿಡುವುದಿಲ್ಲ. ಕಳೆದ 6 ತಿಂಗಳಲ್ಲಿ 12-13 ದಲಿತರ ಹತ್ಯೆ ಇಲ್ಲಿ ನಡೆದಿದೆ. ರಾಜ್ಯದ ಗೃಹ ಸಚಿವರಾಗಲೀ ಪೊಲೀಸ್ ಮಹಾ ನಿರ್ದೇಶಕರಾಗಲೀ ಈ ಪ್ರಕರಣಗಳನ್ನು ಖಂಡಿಸಿಲ್ಲ. ತಪ್ಪಿತಸ್ಥರನ್ನು 24 ಗಂಟೆಗಳೊಳಗೆ ಬಂಧಿಸದಿದ್ದರೆ ನಾವು ಅಹಮದಾಬಾದ್ ಬಂದ್‌ಗೆ ಕರೆ ನೀಡುತ್ತೇವೆ ಎಂದು ಮೇವಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT