ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮರೆವು ಕಾಯಿಲೆ: ಕಳೆದು ಹೋಗಿ ನಾಲ್ಕು ತಿಂಗಳ ಬಳಿಕ ತನ್ನವರ ಸೇರಿದ ವ್ಯಕ್ತಿ!

ಮರೆವು ಹಾಗೂ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನಾಲ್ಕು ತಿಂಗಳ ಹಿಂದೆ ರೈಲು ಪ್ರಯಾಣದ ವೇಳೆ ತಮ್ಮವರಿಂದ ದೂರವಾಗಿ ಮತ್ತೆ ಕುಟುಂಬದವರನ್ನು ಸೇರಿದ್ದಾರೆ.
Published : 28 ಸೆಪ್ಟೆಂಬರ್ 2024, 11:09 IST
Last Updated : 28 ಸೆಪ್ಟೆಂಬರ್ 2024, 11:09 IST
ಫಾಲೋ ಮಾಡಿ
Comments

ಠಾಣೆ, ಮಹಾರಾಷ್ಟ್ರ: ಮರೆವು ಹಾಗೂ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ 73 ವರ್ಷದ ವ್ಯಕ್ತಿಯೊಬ್ಬರು ಕಳೆದ ನಾಲ್ಕು ತಿಂಗಳ ಹಿಂದೆ ರೈಲು ಪ್ರಯಾಣದ ವೇಳೆ ತಮ್ಮವರಿಂದ ದೂರವಾಗಿ ಈಗ ಮತ್ತೆ ಕುಟುಂಬದವರನ್ನು ಸೇರಿರುವ ಘಟನೆ ನಡೆದಿದೆ.

ತಮ್ಮ ಕಟುಂಬದವರೊಂದಿಗೆ ಮಹಾರಾಷ್ಟ್ರದ ರೈಲಿನಲ್ಲಿ ಕಳೆದ ಜುಲೈನಲ್ಲಿ ಜಲ್ನಾದಿಂದ ಮುಂಬೈಗೆ ಹೊರಟಿದ್ದ ಚಾಂದ್‌ ಖಾನ್ ಪಠಾಣ್ ಎನ್ನುವರು ಮರೆವು ಖಾಯಿಲೆಯಿಂದ ತಮ್ಮ ಕುಟುಂಬದವರಿಂದ ಪ್ರತ್ಯೇಕಗೊಂಡಿದ್ದರು.

ಹೀಗೆ ಅಲೆಯುತ್ತಾ ಸಿಂಧುದುರ್ಗಕ್ಕೆ ತೆರಳಿದ್ದ ಅವರನ್ನು ಆಸ್ಪತ್ರೆಯೊಂದರ ಮಾಹಿತಿ ಮೇರೆಗೆ ಸನ್ವಿತಾ ಆಶ್ರಮದವರು ರಕ್ಷಿಸಿದ್ದರು. ಎಷ್ಟೇ ಪ್ರಯತ್ನಪಟ್ಟರೂ ಆಶ್ರಮದವರಿಗೆ ಚಾಂದ್‌ ಖಾನ್ ಯಾರು? ಎ‌ಲ್ಲಿಯವರು? ಎಂಬುದನ್ನು ಪತ್ತೆ ಹಚ್ಚಲು ಆಗಿರಲಿಲ್ಲ.

ಕಡೆಗೆ ಜಲ್ನಾ ಜಿಲ್ಲಾಧಿಕಾರಿಗೆ ಈ ವಿಷಯ ತಿಳಿಸಿದಾಗ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಪೊಲೀಸ್ ಪ್ರಯತ್ನದ ಮೇರೆಗೆ ಚಾಂದಖಾನ್ ಪಠಾಣ್ ಕುಟುಂಬದವರು ಪತ್ತೆಯಾಗಿದ್ದಾರೆ. ಚಾಂದ್‌ ಖಾನ್ ಅವರು ಬೀಡ್ ಜಿಲ್ಲೆಯ ಅಸ್ಟಿ ಎಂಬ ಊರಿನವರು ಎಂಬುದು ಗೊತ್ತಾಗಿದೆ. ಇದೀಗ ಚಾಂದ್‌ ಖಾನ್, ಅಸ್ತಿ ಗ್ರಾಮದ ಮುಖಂಡ ಅಖ್ತರ್ ಅಬ್ದುಲ್ ಶೇಖ್ ಸಹಾಯದಿಂದ ತಮ್ಮ ಕುಟುಂಬದವರನ್ನು ಪುನಃ ಸೇರಿಕೊಂಡಿದ್ದಾರೆ.

ಸಂದೀಪ್ ಪರಾಬ್ ಎನ್ನುವರು ನಡೆಸುತ್ತಿರುವ ಸನ್ವಿತಾ ಆಶ್ರಮದ ಮಾನವೀಯತೆಯನ್ನು ಕುಟುಂಬದವರು ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT