ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್ ಭಾರತದೊಂದಿಗೆ ವಿಲೀನವಾದ ಸೆ.17ರಂದು ರಾಷ್ಟ್ರೀಯ ಏಕೀಕರಣ ದಿನ: ಎಐಎಂಐಎಂ

Published 4 ಸೆಪ್ಟೆಂಬರ್ 2023, 14:10 IST
Last Updated 4 ಸೆಪ್ಟೆಂಬರ್ 2023, 14:10 IST
ಅಕ್ಷರ ಗಾತ್ರ

ಹೈದರಾಬಾದ್‌: 1948ರಲ್ಲಿ ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್‌ ಸಂಸ್ಥಾನವನ್ನು, ಭಾರತದ ಒಕ್ಕೂಟದೊಂದಿಗೆ ವಿಲೀನ ಮಾಡಿದ ದಿನ ಸೆ.17 ಅನ್ನು ರಾಷ್ಟ್ರೀಯ ಏಕೀಕರಣ ದಿನವನ್ನಾಗಿ ಆಚರಿಸಲು ಎಐಎಂಐಎಂ ಪಕ್ಷ ನಿರ್ಧರಿಸಿದೆ.

ಇದರ ಅಂಗವಾಗಿ ಬೈಕ್ ರ‍್ಯಾಲಿ, ಸಾರ್ವಜನಿಕ ಸಭೆಯನ್ನು ಆಯೋಜಿಸಿದ್ದು, ಅಧ್ಯಕ್ಷ ಅಸಾದುದ್ದೀನ್‌ ಓವೈಸಿ, ತೆಲಂಗಾಣ ವಿಧಾನಸಭೆಯಲ್ಲಿ ಪಕ್ಷದ ನಾಯಕರಾಗಿರುವ ಅಕ್ಬರುದ್ದೀನ್‌ ಓವೈಸಿ, ಶಾಸಕರು, ಕಾರ್ಪೊರೇಟರ್‌ಗಳು ಭಾಗವಹಿಸುವರು ಎಂದು ಸೋಮವಾರ ತಿಳಿಸಿದೆ. 

ಹಿಂದಿನ ವರ್ಷ ತೆಲಂಗಾಣ ಸರ್ಕಾರ ರಾಷ್ಟ್ರೀಯ ಏಕೀಕರಣ ದಿನವನ್ನು ಮೂರು ದಿನ ಆಯೋಜಿಸಿದ್ದರೆ, ಕೇಂದ್ರ ಸರ್ಕಾರ ತೆಲಂಗಾಣ ವಿಮೋಚನಾ ದಿನ ಆಚರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT