ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಹಾರದಲ್ಲಿ ಕಬ್ಬಿಣದ ಚೂರು ಪತ್ತೆ: ಸ್ಪಷ್ಟನೆ ನೀಡಿದ ಏರ್‌ ಇಂಡಿಯಾ ಸಂಸ್ಥೆ

Published 17 ಜೂನ್ 2024, 12:26 IST
Last Updated 17 ಜೂನ್ 2024, 12:26 IST
ಅಕ್ಷರ ಗಾತ್ರ

ಮುಂಬೈ: ಪ್ರಯಾಣಿಕರೊಬ್ಬರಿಗೆ ನೀಡಿದ ಆಹಾರದಲ್ಲಿ ಬ್ಲೇಡ್‌ ರೀತಿಯ ಲೋಹದ ತುಂಡು ಪತ್ತೆ ಆಗಿರುವುದಾಗಿ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ ಸೋಮವಾರ ತಿಳಿಸಿದೆ.

ಕಳೆದ ವಾರ ಬೆಂಗಳೂರು– ಸ್ಯಾನ್‌ ಫ್ರಾನ್ಸಿಸ್ಕೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಆಹಾರದಲ್ಲಿ ಲೋಹದ ತುಂಡು ಪತ್ತೆಯಾಗಿತ್ತು. ಈ ಕುರಿತು ಪ್ರಯಾಣಿಕ, ಸಾಮಾಜಿಕ ಜಾಲತಾಣ ‘ಎಕ್ಸ್‌’ ನಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದರು.

ಈ ಕುರಿತು ತನಿಖೆ ನಡೆಸಿದ್ದ ವಿಮಾನಯಾನ ಸಂಸ್ಥೆಯು, ತರಕಾರಿ ಸಂಸ್ಕರಿಸುವ ಯಂತ್ರದಿಂದ ಈ ತುಂಡು ಬಂದಿದೆ. ಏರ್ ಇಂಡಿಯಾವು ಬಾಧಿತ ಗ್ರಾಹಕರಿಗೆ ಆದ ತೊಂದರೆಗೆ ಕ್ಷಮೆಯಾಚಿಸುತ್ತದೆ ಎಂದು ಏರ್ ಇಂಡಿಯಾದ ಅಧಿಕಾರಿ ರಾಜೇಶ್ ಡೋಗ್ರಾ ತಿಳಿಸಿದ್ದಾರೆ.

ಕಳೆದ ಶನಿವಾರ, ನವದೆಹಲಿ-ನೆವಾರ್ಕ್ ವಿಮಾನದ ಬ್ಯುಸಿನೆಸ್‌ ಕ್ಲಾಸ್‌ ಪ್ರಯಾಣಿಕರೊಬ್ಬರು ವಿಮಾನದಲ್ಲಿ ಬೇಯಿಸದ ಆಹಾರವನ್ನು ನೀಡಿದ್ದು, ಆಸನಗಳು ಕೊಳಕಾಗಿದ್ದವು ಎಂದು ಆರೋಪಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT