ಮುಂಬೈ: ಗುಜರಾತ್ನ ಅಹಮದಾಬಾದ್ನಲ್ಲಿ ಜೂನ್ 12ರಂದು ಪತನಗೊಂಡ ಏರ್ ಇಂಡಿಯಾ (AI-171) ವಿಮಾನದ ಕಪ್ಪು ಪೆಟ್ಟಿಗೆ ಎಲ್ಲಿ ತೆರೆದು ಸಂಕೇತ ಬಿಡಿಸಬೇಕು ಎಂಬುದನ್ನು ವಿಮಾನ ಅಪಘಾತ ತನಿಖಾ ಸಂಸ್ಥೆ (AAIB) ನಿರ್ಧರಿಸಲಿದೆ ಎಂದು ಸರ್ಕಾರ ಗುರುವಾರ ಹೇಳಿದೆ.

ಬೋಯಿಂಗ್ 787 ಡ್ರೀಮ್ಲೈನರ್ ಮಾದರಿಯ ವಿಮಾನವು ಜೂನ್ 12ರ ಮಧ್ಯಾಹ್ನ 1.39ಕ್ಕೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಆರ್ಜೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿಲಯಕ್ಕೆ ಡಿಕ್ಕಿ ಹೊಡೆದು ಪತನಗೊಂಡಿತ್ತು. ವಿಮಾನದಲ್ಲಿದ್ದ 241 ಜನರಲ್ಲಿ ಒಬ್ಬರು ಪವಾಡವೆಂಬಂತೆ ಬದುಕುಳಿದರು. ಆದರೆ ಉಳಿದ 241 ಪ್ರಯಾಣಿಕರು, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸುತ್ತಲಿನವರು ಸೇರಿ ಒಟ್ಟು 270ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.

‘ಘಟನೆಯ ತನಿಖೆಯನ್ನು AAIB ಆರಂಭಿಸಿದೆ. ಘಟನಾ ಸ್ಥಳದಿಂದ ಜೂನ್ 13ರಂದು ಡಿಜಿಟಲ್ ವಿಮಾನ ಮಾಹಿತಿ ರೆಕಾರ್ಡರ್ (DFDR) ಮತ್ತು ಕಾಕ್ಪಿಟ್ ಧ್ವನಿ ದಾಖಲು ಪೆಟ್ಟಿಗೆ (CVR)ಯನ್ನು ಸಂಗ್ರಹಿಸಲಾಗಿತ್ತು. ಜೂನ್ 16ರಂದು ಇಂಥ ಮತ್ತೊಂದು ಸಾಧನ ಪತ್ತೆಯಾಗಿತ್ತು’ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.

‘ಸ್ಥಳೀಯ ಸಂಸ್ಥೆಗಳು ಹಾಗೂ ಏಜೆನ್ಸಿಗಳ ನೆರವಿನೊಂದಿಗೆ AAIB ತನಿಖೆ ಮುಂದುವರಿಸಿದೆ. ಸ್ಥಳ ಮಹಜರು ಮತ್ತು ಸಾಕ್ಷಿ ಸಂಗ್ರಹ ಬಹುತೇಕ ಪೂರ್ಣಗೊಂಡಿದೆ. ಮುಂದೆ ದಾಖಲೆಗಳ ವಿಶ್ಲೇಷಣೆ ಬಾಕಿ ಇದೆ. ಆದರೆ ಸಂಗ್ರಹಿಸಲಾದ ಕಪ್ಪು ಪೆಟ್ಟಿಗೆಯ ವಿಶ್ಲೇಷಣೆಗೆ ಅವುಗಳನ್ನು ವಿದೇಶಕ್ಕೆ ಕಳುಹಿಸಲಾಗಿದೆ ಎಂದು ಕೆಲ ಮಾಧ್ಯಮಗಳು ತಪ್ಪಾಗಿ ಸುದ್ದಿ ಪ್ರಸಾರ ಮಾಡುತ್ತಿವೆ. ಆದರೆ ಕೆಲ ತಾಂತ್ರಿಕ, ಸುರಕ್ಷತೆ ಮತ್ತು ಭದ್ರತೆಯನ್ನು ಪರಿಗಣಿಸಿ ಎಂದು ಮತ್ತು ಎಲ್ಲಿ ಇದನ್ನು ತೆರೆಯಬೇಕು ಎಂಬುದನ್ನು AAIB ನಿರ್ಧರಿಸಲಿದೆ’ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.