ಫರೀದಾಬಾದ್: ಚಲಿಸುತ್ತಿದ್ದ ಆಂಬುಲೆನ್ಸ್ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಫರೀದಾಬಾದ್ನಲ್ಲಿ ನಡೆದಿದ್ದು, ಆರು ದಿನಗಳ ಬಳಿಕ ಕೃತ್ಯ ಬೆಳಕಿಗೆ ಬಂದಿದೆ.

‘ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇವರು ಉತ್ತರ ಪ್ರದೇಶದ ಮಥುರಾ ಮತ್ತು ಝಾನ್ಸಿ ಪ್ರದೇಶಕ್ಕೆ ಸೇರಿದವರು. ಇಬ್ಬರನ್ನೂ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ’ ಎಂದು ತನಿಖಾಧಿಕಾರಿ ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಅತ್ಯಾಚಾರ ನಡೆದಿರುವುದು ವ್ಯಾನ್ನಲ್ಲಿ ಅಲ್ಲ, ಖಾಸಗಿ ಆಸ್ಪತ್ರೆಗೆ ಸೇರಿದ ಆಂಬುಲೆನ್ಸ್ನಲ್ಲಿ. ಆರೋಪಿಗಳಲ್ಲಿ ಒಬ್ಬ ಇದೇ ಆಂಬುಲೆನ್ಸ್ನಲ್ಲಿ ಚಾಲಕನಾಗಿ ಮತ್ತೊಬ್ಬ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಇಬ್ಬರೂ ಸೇರಿಕೊಂಡು ಚಲಿಸುತ್ತಿರುವ ಆಂಬುಲೆನ್ಸ್ನಲ್ಲೇ 25 ವರ್ಷದ ಮಹಿಳೆ ಮೇಲೆ ಕೃತ್ಯ ಎಸಗಿದ್ದಾರೆ. ಕೃತ್ಯದ ಬಳಿಕ ಮಹಿಳೆಯನ್ನು ರಸ್ತೆ ಬದಿಗೆ ತಳ್ಳಿ ಪರಾರಿಯಾಗಿದ್ದರು’ ಎಂದು ಅವರು ಹೇಳಿದರು.

ವಿಡಿಯೊ ಬಹಿರಂಗ

ಘಟನೆಯ ನಂತರ ರೆಕಾರ್ಡ್ ಮಾಡಿದ್ದು ಎನ್ನಲಾದ ವಿಡಿಯೊವೊಂದು ಪೊಲೀಸರಿಗೆ ಲಭಿಸಿದೆ. ಈ ವಿಡಿಯೊದಲ್ಲಿ, ‘ನನಗೆ ಆರೋಪಿಗಳ ಯಾವುದೇ ಪೂರ್ವ ಪರಿಚಯ ಇರಲಿಲ್ಲ. ಲಿಫ್ಟ್ ನೀಡಿದ ಬಳಿಕ, ನಾನು ಕಾರಿನಲ್ಲಿ ಕೂತಿರುವಾಗಲೇ ಆರೋಪಿಗಳಲ್ಲಿ ಒಬ್ಬ ನನ್ನ ಪೇಟಿಎಂ ಅಕೌಂಟ್ಗೆ ₹600 ಪಾವತಿಸಿದರು. ಬಳಿಕ ಕಾರ್ನ ಬಾಗಿಲು ಲಾಕ್ ಮಾಡಿ, ನನ್ನ ಮೊಬೈಲ್ ಕಿತ್ತುಕೊಂಡರು.ರಾತ್ರಿ ದಟ್ಟವಾದ ಮಂಜು ಇತ್ತು. ನಾನು ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡೆ.ಆದರೆ, ಯಾವುದೇ ಸಹಾಯ ಸಿಗಲಿಲ್ಲ’ ಎಂದು ಸಂತ್ರಸ್ತೆ ಹೇಳುತ್ತಿರುವುದು ವಿಡಿಯೊದಲ್ಲಿದೆ. ಈ ವಿಡಿಯೊದ ವಿಶ್ವಾಸಾರ್ಹತೆಯನ್ನು ಪರಿಶೀಲನೆಗೆ ಒಳಪಡಿಸಿಲ್ಲ ಎಂದು ಸುದ್ದಿಸಂಸ್ಥೆ ಹೇಳಿದೆ.

‘ಸದ್ಯ ಸಂತಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಚೇತರಿಸಿಕೊಂಡ ನಂತರ, ಆರೋಪಿಗಳ ಗುರುತು ಪತ್ತೆ ಕಾರ್ಯ ನಡೆಯಲಿದೆ. ನಂತರ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸ್ ಮೂಲಗಳ ಪ್ರಕಾರ ಸಂತ್ರಸ್ತ ಮಹಿಳೆ ಡಿ.29ರಂದು ಸಂಜೆ ಫರೀದಾಬಾದ್ನ ಸೆಕ್ಟರ್ 23ರಲ್ಲಿರುವ ಸ್ನೇಹಿತೆಯ ಮನೆಗೆ ಹೊಗಿದ್ದರು. ಮಧ್ಯರಾತ್ರಿ ವಾಪಸ್ ಬರುವಾಗ ಎನ್ಐಟಿ–2 ಚೌಕ್ವರೆಗೆ ಆಟೊರಿಕ್ಷಾದಲ್ಲಿ ಬಂದು, ಅಲ್ಲಿಂದ ಮೆಟ್ರೊ ಚೌಕ್ಗೆ ನಡೆದುಕೊಂಡು ಹೊರಟಿದ್ದರು. ಅಲ್ಲಿಂದ ಇನ್ನೊಂದು ಆಟೊದಲ್ಲಿ ಮನೆಗೆ ಹೋಗಲು ನಿರ್ಧರಿಸಿದ್ದರು. ಮೆಟ್ರೊ ಚೌಕ್ಬಳಿ ಆರೋಪಿಗಳು ಮಹಿಳೆಯನ್ನು ಮನೆಗೆ ಬಿಡುವುದಾಗಿ ಹೇಳಿ ತಮ್ಮ ವಾಹನಕ್ಕೆ ಹತ್ತಿಸಿಕೊಂಡರು. ಮಹಿಳೆ ಹೇಳಿದ ಮಾರ್ಗದಲ್ಲಿ ತೆರಳದೆ, ಗುಡಗಾಂವ್ನತ್ತ ವಾಹನ ಚಲಾಯಿಸಿದರು. ಚಲಿಸುತ್ತಿರುವ ವಾಹನದಲ್ಲೇ ಮಹಿಳೆ ಮೇಲೆ ಅತ್ಯಾಚಾರ ಎಸಗಿದರು. ರಾತ್ರಿಯಿಡೀ ಮಹಿಳೆಯನ್ನು ವಾಹನದಲ್ಲೇ ಸುತ್ತಿಸಿದ ಆರೋಪಿಗಳು, ಬೆಳಗಿನ ಜಾವ 3ರ ಸುಮಾರಿಗೆ ಫರೀದಾಬಾದ್ನ ರಾಜಾ ಚೌಕ್ ಬಳಿ ರಸ್ತೆಗೆ ನೂಕಿ ಹೋದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.