ಸಿಲಿಗುರಿ: ‘ಸಿಲಿಗುರಿ ಕಾರಿಡಾರ್’ ಭಾರತಕ್ಕೆ ಸೇರಿದ್ದು. ಅದರ ಮೇಲೆ ಯಾರೂ ಕೈ ಇಡಲಾರರು. ಈ ವಿಚಾರವಾಗಿ ಯಾವುದೇ ಬೆದರಿಕೆ ಒಡ್ಡುವುದಕ್ಕೂ ಆಸ್ಪದ ನೀಡುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಪ್ರತಿಪಾದಿಸಿದ್ದಾರೆ.

ಇಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಸಚಿವ, ‘ದೆಹಲಿಯಲ್ಲಿ ಕೆಲವು ಮಂದಿ ಸಿಲಿಗುರಿ ಕಾರಿಡಾರ್ ಅನ್ನು ದೇಶದಿಂದ ವಿಭಜಿಸುವುದಾಗಿ ಘೋಷಣೆ ಕೂಗಿದ್ದರು. ಅದು ಹೇಗೆ ಸಾಧ್ಯವಾಗುತ್ತದೆ? ಸಿಲಿಗುರಿ ಕಾರಿಡಾರ್ ಏನು ನಿಮ್ಮ ಅಪ್ಪನದ್ದೇ? ಇದು ಭಾರತದ ಭೂಮಿ. ಯಾರೂ ಅದರ ಮೇಲೆ ಕೈ ಹಾಕಲಾಗದು’ ಎಂದಿದ್ದಾರೆ.

‘ಸಿಲಿಗುರಿಯನ್ನು ದೇಶದಿಂದ ವಿಭಜಿಸುವ ಮಾತನಾಡಿದವರನ್ನು ಪೊಲೀಸರು ಕಂಬಿಗಳ ಹಿಂದೆ ಕೂರುವಂತೆ ಮಾಡಿದ್ದರು. ಆದರೆ, ಇಂಡಿಯಾ ಕೂಟದ ಕೆಲವು ಮಂದಿ ಅವರನ್ನು ಜೈಲಿನಿಂದ ಹೊರತರಲು ಬಹಳ ಪ್ರಯತ್ನ ಮಾಡಿದ್ದರು’ ಎಂದೂ ಅಮಿತ್ ಶಾ ಆರೋಪಿಸಿದ್ದಾರೆ.

‘ಅಲ್ಲದೇ, ಇಂಡಿಯಾ ಕೂಟದ ಸಂಸದರು ಆರೋಪಿಗಳ ಪರವಾಗಿ ವಾದ ಮಂಡಿಸಲು ಸುಪ್ರೀಂ ಕೋರ್ಟ್ವರೆಗೂ ಹೋಗಿದ್ದರು. ಆದರೆ, ಕಡೆಯಲ್ಲಿ ಸತ್ಯಕ್ಕೆ ಜಯ ಸಂದಿತು. ಸುಪ್ರೀಂ ಕೋರ್ಟ್ ಕೂಡ ಅವರಿಗೆ ಜಾಮೀನು ನೀಡಲು ನಿರಾಕರಿಸಿತು’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.