ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರ ಮನೆಗಳನ್ನು ಅಕ್ರಮವಾಗಿ ಕೆಡವುದನ್ನು ತಕ್ಷಣ ನಿಲ್ಲಿಸಿ: ಆಮ್ನೆಸ್ಟಿ

Published 8 ಫೆಬ್ರುವರಿ 2024, 2:54 IST
Last Updated 8 ಫೆಬ್ರುವರಿ 2024, 2:54 IST
ಅಕ್ಷರ ಗಾತ್ರ

ನವದೆಹಲಿ: ಜೆಸಿಬಿ, ಬುಲ್ಡೋಜರ್ ಹಾಗೂ ಇನ್ನಿತರ ಯಂತ್ರಗಳನ್ನು ಬಳಸಿ ಮುಸ್ಲಿಮರ ಮನೆ, ಉದ್ಯಮ ಹಾಗೂ ಆರಾಧನ ಸ್ಥಳಗಳನ್ನು ಅಕ್ರಮವಾಗಿ ಧ್ವಂಸ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಮಾನವ ಹಕ್ಕುಗಳ ಸಂಸ್ಥೆ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಭಾರತವನ್ನು ಆಗ್ರಹಿಸಿದೆ.

‘ನೀವು ಮಾತನಾಡಿದರೆ, ನಿಮ್ಮ ಮನೆಯನ್ನು ಕೆಡವಲಾಗುತ್ತದೆ: ಭಾರತದಲ್ಲಿ ಬುಲ್ಡೋಜರ್ ಅನ್ಯಾಯ ಮತ್ತು ಹೊಣೆಗಾರಿಕೆಯನ್ನು ಬೆಳಕಿಗೆ ತರುವುದು’ ಹಾಗೂ ‘ಭಾರತದಲ್ಲಿ ಬುಲ್ಡೋಜರ್ ಅನ್ಯಾಯದಲ್ಲಿ ಜೆಸಿಬಿ ಪಾತ್ರ ಮತ್ತು ಜವಾಬ್ದಾರಿ’ ಎನ್ನುವ ಎರಡು ವರದಿಗಳನ್ನು ಆಮ್ನೆಸ್ಟಿ ಪ್ರಟಕಟಿಸಿದೆ.

ಕನಿಷ್ಠ 5 ರಾಜ್ಯಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ‘ದ್ವಂಸ ಶಿಕ್ಷೆ’ಯ ಮೂಲಕ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷದ ಪ್ರಚಾರದಲ್ಲಿ, ಜೆಸಿಬಿ, ಬುಲ್ಡೋಜರ್‌ಗಳನ್ನು ಬಳಸುತ್ತಿದೆ ಎಂದು ಅದು ಹೇಳಿದೆ.

ಕಾನೂನು ಬಾಹಿರವಾಗಿ ಜನರ ಮನೆಗಳ ಕೆಡವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದ್ದು, ಬಲವಂತದ ಒಕ್ಕಲೆಬ್ಬಿಸುವುವಿಕೆಯಿಂದ ಯಾರನ್ನೂ ನಿರಾಶ್ರಿತರನ್ನಾಗಿ ಮಾಡಬಾರದು ಎಂದು ಹೇಳಿದೆ.

ಇಂತಹ ಧ್ವಂಸಗಳ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಈ ಉಲ್ಲಂಘನೆಗೆ ಕಾರಣವಾದವರನ್ನು ಜವಾಬ್ದಾರರನ್ನಾಗಿ ಮಾಡಬೇಕು ಎಂದು ಆಮ್ನೆಸ್ಟಿ ಒತ್ತಾಯಿಸಿದೆ.

ರಾಜಕೀಯ ನಾಯಕರು ಮತ್ತು ಮಾಧ್ಯಮಗಳಿಂದ 'ಬುಲ್ಡೋಜರ್ ನ್ಯಾಯ' ಎಂಬಂತೆ ಭಾರತೀಯ ಅಧಿಕಾರಿಗಳು, ಮುಸ್ಲಿಮರ ಆಸ್ತಿಗಳನ್ನು ಕಾನೂನುಬಾಹಿರವಾಗಿ ಕೆಡವಿರುವುದು ಕ್ರೂರ ಮತ್ತು ಭಯಾನಕ. ಅಂತಹ ಕ್ರಮ ತೀವ್ರ ಅನ್ಯಾಯಕಾರಿಯಾಗಿದೆ. ಕಾನೂನುಬಾಹಿರ ಮತ್ತು ತಾರತಮ್ಯವಾಗಿದೆ. ಅವರು ಕುಟುಂಬಗಳನ್ನು ನಾಶಪಡಿಸುತ್ತಿದ್ದಾರೆ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಪ್ರಧಾನ ಕಾರ್ಯದರ್ಶಿ ಆಗ್ನೆಸ್ ಕ್ಯಾಲಮರ್ಡ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT