ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಂದೆ ದುಬಾರಿ ಬೆಲೆಯ ಐಫೋನ್‌ ಕೊಡಿಸದಿದ್ದಕ್ಕೆ ಮನನೊಂದು 18 ವರ್ಷದ ಮಗ ಆತ್ಮಹತ್ಯೆ

Published 10 ಜುಲೈ 2024, 13:10 IST
Last Updated 10 ಜುಲೈ 2024, 13:10 IST
ಅಕ್ಷರ ಗಾತ್ರ

ಥಾಣೆ: ದುಬಾರಿ ಬೆಲೆಯ ಐಫೋನ್‌ ಅನ್ನು ತಂದೆ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈಯಲ್ಲಿ ನಡೆದಿದೆ.

ಮೃತ ಯುವಕನನ್ನು ಕಾಮೋಥೆ ನಿವಾಸಿ ಸಂಜಯ್ ವರ್ಮಾ (18) ಎಂದು ಗುರುತಿಸಲಾಗಿದೆ.

ಯುವಕನು ತಂದೆ ಬಳಿ ₹1.5 ಲಕ್ಷ ರೂಪಾಯಿ ಬೆಲೆಯ ಐಫೋನ್ ಕೊಡಿಸುವಂತೆ ಕೇಳಿದ್ದನು. ಆದರೆ ತಂದೆ, ಮಗನಿಗೆ ವಿವೋ ಫೋನ್‌ ಅನ್ನು ತಂದು ಕೊಟ್ಟಿದ್ದಾರೆ. ಇದರಿಂದ ಸಂಜಯ್ ಖಿನ್ನತೆಗೆ ಒಳಗಾಗಿದ್ದನು. ಇದೇ ಕಾರಣಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಜುಲೈ 8ರಂದು ಈ ಘಟನೆ ನಡೆದಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT