ಅಮರಾವತಿ: ಆಂಧ್ರಪ್ರದೇಶದಾದ್ಯಂತ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯನ್ನು ಆಗಸ್ಟ್ 15ರಿಂದ ಆರಂಭಿಸಲಾಗುತ್ತದೆ ಎಂದು ಸಚಿವ ಕೆ. ಪಾರ್ಥಸಾರಥಿ ಅವರು ಬುಧವಾರ ಘೋಷಿಸಿದ್ದಾರೆ.

ಈ ಯೋಜನೆಗೆ ವಾರ್ಷಿಕವಾಗಿ ₹1,942 ಕೋಟಿ, ಮಾಸಿಕವಾಗಿ ಸುಮಾರು ₹162 ಕೋಟಿ ವೆಚ್ಚ ತಗಲಲಿದೆ ಎಂದು ಸಚಿವರು ಹೇಳಿದ್ದಾರೆ.

ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಈ ಯೋಜನೆಗೆ ‘ಸ್ತ್ರೀ ಶಕ್ತಿ’ (ಮಹಿಳೆಯರ ಶಕ್ತಿ) ಎಂದು ಹೆಸರಿಡಲಾಗಿದ್ದು, ರಾಜ್ಯದಾದ್ಯಂತ ಜಾರಿಗೊಳ್ಳಲಿದೆ. ಮಹಿಳೆಯರು ಆಗಸ್ಟ್ 15ರಿಂದ ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸಬಹುದು ಎನ್ನುವುದನ್ನು ತಿಳಿಸಲು ಸಂತೋಷವಾಗುತ್ತಿದೆ’ ಎಂದು ಹೇಳಿದ್ದಾರೆ.

ಉಚಿತ ಬಸ್ ಯೋಜನೆ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿರಲಿದೆ ಎನ್ನುವ ವರದಿಗಳನ್ನು ಅಲ್ಲಗಳೆದ ಸಚಿವರು, ರಾಜ್ಯದಾದ್ಯಂತ ಜಾರಿಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಎಪಿಎಸ್ಆರ್ಟಿಸಿ) ಬಳಿ 11,449 ಬಸ್ಗಳಿದ್ದು, 8,456 ಅಂದರೆ, ಸುಮಾರು ಶೇ 75ರಷ್ಟು ಬಸ್ಗಳು ‘ಸ್ತ್ರೀ ಶಕ್ತಿ’ ಯೋಜನೆಗೆ ಒಳಪಡಲಿವೆ.

ಪಲ್ಲೆ ವೆಲುಗು, ಅಲ್ಟ್ರಾ ಪಲ್ಲೆ ವೆಲುಗು, ಸಿಟಿ ಆರ್ಡಿನರಿ, ಮೆಟ್ರೊ ಎಕ್ಸ್ಪ್ರೆಸ್ ಬಸ್ಗಳು ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಿದೆ. ಈ ಯೋಜನೆ ವಾರ್ಷಿಕವಾಗಿ 1.4 ಕೋಟಿ ಮಹಿಳೆಯರಿಗೆ ಪ್ರಯೋಜನ ನೀಡಲಿದೆ ಎಂದೂ ಸಚಿವರು ತಿಳಿಸಿದ್ದಾರೆ.ಎಂದೂ ಸಚಿವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.