ಅಮರಾವತಿ: ವಾಟ್ಸ್ಆ್ಯಪ್ ಮೂಲಕ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವ ಸೇವೆಯನ್ನು ಶೀಘ್ರವೇ ಆರಂಭಿಸಲಾಗುತ್ತದೆ ಎಂದು ಆಂಧ್ರಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ವಿಜಯಾನಂದ ತಿಳಿಸಿದ್ದಾರೆ.

ವಾಟ್ಸ್ಆ್ಯಪ್ ಮೂಲಕ ಆಡಳಿತ ಸೇವೆಗಳು ಎಂಬ ಹೊಸ ನೀತಿಯ ಅನುಸಾರ ಇದನ್ನು ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ತಿಂಗಳಾಂತ್ಯಕ್ಕೆ ತೆನಾಲಿ ಜಿಲ್ಲೆಯಲ್ಲಿ ವಾಟ್ಸ್ಆ್ಯಪ್ ಮೂಲಕ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವ ಸೇವೆಯನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

ವಿಜಯಾನಂದ ಅವರು ಸೋಮವಾರ ರಿಯಲ್ ಟೈಮ್ ಗವರ್ನೆನ್ಸ್ ಸೊಸೈಟಿ (ಆರ್ಟಿಜಿಎಸ್) ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಆಡಳಿತ ಸೇವೆಗಳು ಜನ ಸ್ನೇಹಿಯಾಗಿರಬೇಕು. ಡಿಜಿಟಲ್ ತಂತ್ರಜ್ಞಾನದಿಂದ ‘ರಿಯಲ್ ಟೈಮ್’ನಲ್ಲಿ ಸಾಧ್ಯವಿರುವಷ್ಟು ಸೇವೆಗಳು ಜನರಿಗೆ ದೊರಕಬೇಕು ಎಂಬ ಕೆಲಸಗಳನ್ನು ಈ ರಿಯಲ್ ಟೈಮ್ ಗವರ್ನೆನ್ಸ್ ಸೊಸಾಯಿಟಿ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ಹಂತ ಹಂತವಾಗಿ ಪಂಚಾಯತ್ ರಾಜ್, ಆರೋಗ್ಯ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಸೇವೆಗಳು ವಾಟ್ಸ್ಆ್ಯಪ್ ಮೂಲಕ ಜನರಿಗೆ ಸುಲಭವಾಗಿ ಸಿಗುವಂತೆ ಮಾಡಲಾಗುವುದು ಎಂದು ವಿವರಿಸಿದ್ದಾರೆ.

ಸಿಎಂ ಚಂದ್ರಬಾಬು ನಾಯ್ಡು ಅವರ ಒತ್ತಾಸೆಯಿಂದ ಆರ್ಟಿಜಿಎಸ್ ತ್ವರಿತವಾಗಿ ಕೆಲಸ ಮಾಡುತ್ತಿದೆ ಎಂದು ಕೆ. ವಿಜಯಾನಂದ ಹೇಳಿದ್ದಾರೆ.
.ಟೂಲ್ಕಿಟ್ ಬಹಳ ಸೊಗಸಾಗಿದೆ.. ಬಿಜೆಪಿಯ ವಾಟ್ಸ್ಆ್ಯಪ್ ಚಾಟ್ ಹಂಚಿಕೊಂಡ ಖರ್ಗೆ.ಹುಬ್ಬಳ್ಳಿ | ವಾಟ್ಸ್ಆ್ಯಪ್ ಗ್ರೂಪ್ ಹ್ಯಾಕ್; ‘ಎಪಿಕೆ’ ಕರಾಮತ್ತು!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.