ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವಾಹ ಪರಿಹಾರ ಕಾರ್ಯಾಚರಣೆಗೆ ಕೇಂದ್ರದಿಂದ ಆಂಧ್ರಕ್ಕೆ ವಿದ್ಯುತ್ ಚಾಲಿತ ಬೋಟ್‌

Published : 2 ಸೆಪ್ಟೆಂಬರ್ 2024, 5:59 IST
Last Updated : 2 ಸೆಪ್ಟೆಂಬರ್ 2024, 5:59 IST
ಫಾಲೋ ಮಾಡಿ
Comments

ಅಮರಾವತಿ: ಪ್ರವಾಹ ಪೀಡಿತ ವಿಜಯವಾಡದಲ್ಲಿ ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ನೀಡಿರುವ ವಿದ್ಯುತ್ ಚಾಲಿತ ಬೋಟ್‌ಗಳನ್ನು ಆಂಧ್ರ ಪ್ರದೇಶ ಸರ್ಕಾರ ಸ್ವೀಕರಿಸಿದೆ.

ಪ್ರವಾಹ ತುರ್ತು ಪರಿಸ್ಥಿತಿ ನಿಭಾಯಿಸಲು ವಿದ್ಯುತ್ ಚಾಲಿತ ಬೋಟ್‌ಗಳು ಮತ್ತು ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡಗಳನ್ನು ಕಳುಹಿಸುವಂತೆ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬೇಡಿಕೆ ಸಲ್ಲಿಸಿದ್ದರು.

ಬೇಡಿಕೆಗೆ ಸ್ಪಂದಿಸಿದ್ದ ಕೇಂದ್ರ ಗೃಹ ಸಚಿವಾಲಯ, 40 ವಿದ್ಯುತ್ ಚಾಲಿತ ಬೋಟ್‌ಗಳು ಮತ್ತು 6 ಹೆಲಿಕಾಪ್ಟರ್‌ಗಳನ್ನು ಕಳುಹಿಸಲಾಗುವುದು ಭರವಸೆ ನೀಡಿತ್ತು.

‘ವಿದ್ಯುತ್ ಚಾಲಿತ ಬೋಟ್‌ಗಳು ವಿಜಯವಾಡ ತಲುಪಿವೆ. ಕೇಂದ್ರದೊಂದಿಗಿನ ಮಾತುಕತೆಯ ನಂತರ, ಇತರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಬೋಟ್‌ಗಳನ್ನು ಇಲ್ಲಿಗೆ ರವಾನಿಸಲಾಗಿದೆ. ಬೋಟ್‌ಗಳನ್ನು ಬಳಸಿಕೊಂಡು ಅಜಿತ್ ಸಿಂಗ್ ನಗರದಲ್ಲಿ ಆಹಾರ ವಿತರಿಸಲಾಗುತ್ತಿದೆ’ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಏತನ್ಮಧ್ಯೆ, ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿರುವವರಿಗೆ ಬಟ್ಟೆ, ಹಾಲಿನ ಪ್ಯಾಕೆಟ್, ಆಹಾರ ಮತ್ತು ನೀರಿನ ಬಾಟಲಿಗಳನ್ನು ವಿತರಿಸುವಂತೆ ನಾಯ್ಡು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT