ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಸಿನ್‌ ಮಲಿಕ್‌ ಪ‍ತ್ನಿ ನೇಮಕ ಪಾಕಿಸ್ತಾನದ ಆಂತರಿಕ ವಿಚಾರ ಎಂದ ಒಮರ್‌ ಅಬ್ದುಲ್ಲಾ

Published 21 ಆಗಸ್ಟ್ 2023, 16:01 IST
Last Updated 21 ಆಗಸ್ಟ್ 2023, 16:01 IST
ಅಕ್ಷರ ಗಾತ್ರ

ಶ್ರೀನಗರ: ‘ಈಚೆಗೆ ನೇಮಕವಾದ ಪಾಕಿಸ್ತಾನ ಹಂಗಾಮಿ ಪ್ರಧಾನಿ ಅನ್ವರ್‌ ಉಲ್‌ ಹಖ್‌ ಕಾಕರ್‌ ಅವರ ವಿಶೇಷ ಸಲಹೆಗಾರ್ತಿಯಾಗಿ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲಿಕ್‌ ಪತ್ನಿಯನ್ನು ನೇಮಿಸಿರುವುದು ಆ ದೇಶದ ಆಂತರಿಕ ವಿಚಾರ’ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಒಮರ್‌ ಅಬ್ದುಲ್ಲಾ ಅವರು ಸೋಮವಾರ ಹೇಳಿದ್ದಾರೆ.

ಮಾನವ ಹಕ್ಕುಗಳು ಮತ್ತು ಮಹಿಳಾ ಸಬಲೀಕರಣದ ವಿಚಾರವಾಗಿ ಯಾಸಿನ್‌ ಪತ್ನಿ ಮಿಷಲ್‌ ಹುಸೇನ್‌ ಮಲಿಕ್‌ ಅವರನ್ನು ಪ್ರಧಾನಿ ಸಲಹೆಗಾರ್ತಿಯಾಗಿ ನೇಮಿಸಲಾಗಿದೆ.

‘ನಾವು ಸಚಿವರನ್ನು ನೇಮಿಸುವ ಮುಂಚೆ ಪಾಕಿಸ್ತಾನವನ್ನು ಸಂಪರ್ಕಿಸುತ್ತೇವೆಯೇ? ಹಾಗೆಯೇ, ಅವರು ಸಚಿವರನ್ನು ನೇಮಿಸುವಾಗ ನಮ್ಮನ್ನು ಸಂಪರ್ಕಿಸಬೇಕು ಎಂದು ಏಕೆ ನಿರೀಕ್ಷಿಸಬೇಕು? ಅದು ಅವರ ಆಂತರಿಕ ವಿಚಾರವಾಗಿದ್ದು, ನಮಗೆ ಸಂಬಂಧಿಸಿದ್ದಲ್ಲ’ ಎಂದು ಉಮರ್‌ ಅವರು ಸುದ್ದಿಗಾರರೊಂದಿಗೆ ಹೇಳಿದ್ದಾರೆ. 

ಭಾರತದ ಭೂಪ್ರದೇಶವನ್ನು ಚೀನಾ ಆಕ್ರಮಣ ಮಾಡುತ್ತಿರುವ ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ವಾಕ್‌ಸಮರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ‘ನಾನು ಲಡಾಕ್‌ನಲ್ಲಿ ಇಲ್ಲ. ರಾಹುಲ್‌ ಗಾಂಧಿ ಅವರೇ ಈ ಪ್ರಶ್ನೆಗೆ ಉತ್ತರಿಸುತ್ತಾರೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT