ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿ ಕೇಜ್ರಿವಾಲ್‌ರನ್ನು ಭೇಟಿಯಾದ ಪತ್ನಿ ಸುನೀತಾ

Published 5 ಜೂನ್ 2024, 15:29 IST
Last Updated 5 ಜೂನ್ 2024, 15:29 IST
ಅಕ್ಷರ ಗಾತ್ರ

ನವದೆಹಲಿ: ತಿಹಾರ್‌ ಜೈಲಿನಲ್ಲಿರುವ ದಹೆಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಅವರ ಪತ್ನಿ ಸುನೀತಾ ಕೇಜ್ರಿವಾಲ್‌ ಮತ್ತು ಎಎಪಿ ಸಂಸದ ರಾಘವ್‌ ಚಡ್ಡಾ ಬುಧವಾರ ಭೇಟಿ ಮಾಡಿದರು ಎಂದು ಜೈಲಿನ ಮೂಲಗಳು ತಿಳಿಸಿವೆ.

ಮಧ್ಯಾಹ್ನ 1 ಗಂಟೆಗೆ ಇಬ್ಬರೂ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದರು. ಜೈಲಿನ ನಿಯಮಗಳ ಪ್ರಕಾರ ಇಬ್ಬರಿಗೂ ಮಾತನಾಡಲು ಅರ್ಧ ಗಂಟೆ ಅವಕಾಶ ನೀಡಲಾಗಿತ್ತು.

ನಿಯಮಗಳ ಪ್ರಕಾರ ಇಬ್ಬರು ಸಂದರ್ಶಕರು ಜೈಲಿನಲ್ಲಿರುವ ಕೈದಿಯನ್ನು ವಾರಕ್ಕೆ ಎರಡು ಬಾರಿ ಭೇಟಿ ಮಾಡಬಹುದು. ಅಲ್ಲದೆ ಕೈದಿಯು ತನ್ನ ಕುಟುಂಬದವರ ಜತೆ ನಿತ್ಯ ಐದು ನಿಮಿಷ ಫೋನ್‌ನಲ್ಲಿ ಮಾತನಾಡಬಹುದು.

ಟಿ.ವಿಯಲ್ಲಿ ಫಲಿತಾಂಶ ವೀಕ್ಷಣೆ:

ಕೇಜ್ರಿವಾಲ್‌ ಅವರು ತಮ್ಮ ಕೊಠಡಿಯ ಟಿ.ವಿಯಲ್ಲಿ ಮಂಗಳವಾರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ವೀಕ್ಷಿಸಿದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT