ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ನಾಗರಿಕ ಸಂಹಿತೆ: ಇಲ್ಲಿಯವರೆಗೆ 46 ಲಕ್ಷ ಪ್ರತಿಕ್ರಿಯೆಗಳು ಸಲ್ಲಿಕೆ

Published 11 ಜುಲೈ 2023, 12:23 IST
Last Updated 11 ಜುಲೈ 2023, 12:23 IST
ಅಕ್ಷರ ಗಾತ್ರ

ನವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ಅಭಿಪ್ರಾಯಗಳನ್ನು ಕಳುಹಿಸಲು ನಿಗದಿಪಡಿಸಿರುವ ಗಡುವು ಕೊನೆಗೊಳ್ಳುವುದಕ್ಕೂ ಎರಡು ದಿನ ಮುನ್ನದ ವೇಳೆಗೆ ಸುಮಾರು 46 ಲಕ್ಷ ಪ್ರತಿಕ್ರಿಯೆಗಳು ಸಲ್ಲಿಕೆಯಾಗಿವೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

ಮುಂದಿನ ದಿನಗಳಲ್ಲಿ ಆಯೋಗವು ಕೆಲ ಸಂಘಟನೆಗಳು ಮತ್ತು ಜನರೊಂದಿಗೆ ಈ ಕುರಿತು ವೈಯಕ್ತಿಕ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಸಂಬಂಧ ಈಗಾಗಲೇ ಸಂಬಂಧಿಸಿದವರಿಗೆ ಆಹ್ವಾನ ಪತ್ರಗಳನ್ನು ರವಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಸೋಮವಾರ ಸಂಜೆಯ ವೇಳೆಗೆ ಸುಮಾರು 46 ಲಕ್ಷ ಪ್ರತಿಕ್ರಿಯೆಗಳು ಸಲ್ಲಿಕೆಯಾಗಿವೆ.

ಕಾನೂನು ಆಯೋಗವು ಜೂನ್‌ 14ರಂದು ಯುಸಿಸಿ ಸಂಬಂಧ ಹೊಸದಾಗಿ ಸಮಾಲೋಚನಾ ಪ್ರಕ್ರಿಯೆಗಳಿಗೆ ಚಾಲನೆ ನೀಡಿತು. ಈ ಸೂಕ್ಷ್ಮ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು, ಮಾನ್ಯತೆ ಪಡೆದ ಧಾರ್ಮಿಕ ಸಂಘ ಸಂಸ್ಥೆಗಳು, ಭಾಗೀದಾರರು ಅಭಿಪ್ರಾಯಗಳನ್ನು ಪಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT