‘ನಮ್ಮ ಸೈನಿಕರು ಎತ್ತರದ ಬೆಟ್ಟಗಳ ನಡುವೆ ಚೀನಿ ಸೈನಿಕರನ್ನು ಕಳೆದ 40 ತಿಂಗಳಿನಿಂದ ಎದುರಿಸುತ್ತಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ಚೀನಾದ ಮುಂದೆ ನಡು ಬಗ್ಗಿಸಿದ್ದರಿಂದ ನಾವು ನಮ್ಮ ಪ್ರದೇಶ ಕಳೆದುಕೊಳ್ಳಬೇಕಾಯಿತು. ಚೀನಾ ವಶಪಡಿಸಿಕೊಂಡಿರುವ 2 ಸಾವಿರ ಚದರ ಕಿ.ಮೀ ಭೂಮಿಯು ಬಿಜೆಪಿಯ ಖಾಸಗಿ ಸ್ವತ್ತಲ್ಲ. ಈ ದೇಶದ ನೆಲ. ಇದು ನಮ್ಮ ದೇಶದ ಭದ್ರತೆಯ ಅವಿಭಾಜ್ಯ ಅಂಗವಾಗಿದೆ’ ಎಂದು ಓವೈಸಿ ವಾಗ್ದಾಳಿ ನಡೆಸಿದ್ದಾರೆ.